ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜಾಜ್ ಡಿಸ್ಕವರ್ ಮೋಟಾರ್ ಬೈಕ್ ಪ್ರಥಮ

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸೆಪ್ಟೆಂಬರ್‌ನಲ್ಲಿ 1,22,968 ಬಜಾಜ್ ಡಿಸ್ಕವರ್ ಮೋಟಾರ್ ಬೈಕ್ ಮಾರಾಟವಾಗುವ ಮೂಲಕ  ಮೋಟಾರ್ ಬೈಕ್ ವಿಭಾಗದಲ್ಲಿ 1ನೇ ಸ್ಥಾನಕ್ಕೇರಿದೆ. ಇದೇ ವೇಳೆ ಸ್ಪ್ಲೆಂಡರ್ ಬ್ರಾಂಡ್‌ನ 1,21,018 ಮೋಟಾರ್ ಬೈಕ್ ಮಾರಾಟವಾಗಿವೆ~ ಎಂದು ಬಜಾಜ್ ಆಟೊ ಕಂಪೆನಿ ತಿಳಿಸಿದೆ.

`ಡಿಸ್ಕವರ್ ಬೈಕ್ ತಂತ್ರಜ್ಞಾನ ಮತ್ತು ಮಾರುಕಟ್ಟೆ ಎರಡರಲ್ಲಿಯೂ ಯಶಸ್ಸು ಗಳಿಸಿದೆ~ ಎಂದು `ಬಜಾಜ್ ಆಟೊ~ ಮೋಟಾರ್ ಸೈಕಲ್ ಬಿಜಿನೆಸ್ ವಿಭಾಗದ ಅಧ್ಯಕ್ಷ ಕೆ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಬಜಾಜ್ ಆಟೊ, ಡಿಸ್ಕವರ್ ಬ್ರಾಂಡ್‌ನಲ್ಲಿ ನಾಲ್ಕು ಮಾದರಿ ಬೈಕ್‌ಗಳನ್ನು ಮಾರಾಟ ಮಾಡುತ್ತಿದೆ. ಈ ವರ್ಷಾಂತ್ಯದಲ್ಲಿ 100ಸಿಸಿ ಸಾಮರ್ಥ್ಯದ ಹೊಸ ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT