ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜಾಜ್ ಸುರಕ್ಷಿತ ಚಾಲನೆ

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವಿಮಾ ಸಂಸ್ಥೆ ಬಜಾಜ್ ಅಲಯಂಜ್ ಭಾನುವಾರದಿಂದ  ಅ. 11ರ ವರೆಗೆ ನಗರದ ವಿವಿಧೆಡೆ ಸುರಕ್ಷಿತ ವಾಹನ ಚಾಲನೆ ಕುರಿತು ಜನಜಾಗೃತಿ ಆಂದೋಲನ ನಡೆಸಲಿದೆ.
ಉದ್ದೇಶಿತ ಮೊದಲ ಭಾರತೀಯ ಫಾರ್ಮ್ಯುಲಾ ಒನ್ ಗ್ರಾಂಡ್ ಫಿಕ್ಸ್‌ಗೆ ಪೂರಕವಾಗಿ ಮತ್ತು ಫಾರ್ಮ್ಯುಲಾ ಒನ್ ರೇಸಿಂಗ್ ಆಧಾರಿತ ಗೇಮ್‌ಗಳೊಂದಿಗೆ ಇದನ್ನು ಆಯೋಜಿಸಲಾಗಿದೆ.

ಇದರಲ್ಲಿ ಭಾಗವಹಿಸುವವರು ಎಫ್ 1 ಡ್ರೈವಿಂಗ್ ಚಾಂಪಿಯನ್ ಮರ್ಸಿಡಿಸ್ ಪೆಟ್ರೋನಾಸ್‌ನ  ನಿಕೋ ರೋಸ್‌ಬರ್ಗ್‌ರನ್ನು ನೋಯ್ಡೊದಲ್ಲಿ ಅ. 25ರಂದು ಭೇಟಿಯಾಗುವ ಅವಕಾಶ ಪಡೆಯಲಿದ್ದಾರೆ.

ಅಧ್ಯಯನದ ಪ್ರಕಾರ ಭಾರತದಲ್ಲಿ ಅಪಘಾತದಲ್ಲಿ ಪ್ರತಿ ವರ್ಷ ಅಂದಾಜು 1.5 ಲಕ್ಷ ಸಾವು ಸಂಭವಿಸುತ್ತವೆ. ಪ್ರತಿ ವರ್ಷ ಸುಮಾರು 12 ಲಕ್ಷ ಕಾರುಗಳಿಗೆ ವಿಮಾ ಸೌಲಭ್ಯ ಒದಗಿಸುವ ಸಂಸ್ಥೆಯಾಗಿ ನಾವು ಸುರಕ್ಷಿತ ಚಾಲನೆ ಕುರಿತು ಜಾಗತಿ ಮೂಡಿಸುವ ಅಗತ್ಯ ಕುರಿತು ಕಾಳಜಿ ಹೊಂದಿದ್ದೇವೆ.

ಜಾಗೃತಿ ಎಂದರೆ ಅಪಘಾತದ ಪ್ರಮಾಣವನ್ನು ಕಡಿಮೆ  ಮಾಡುವುದೇ ಆಗಿದೆ ಎಂದು ಬಜಾಜ್ ಅಲಯಂಜ್ ಮಾರುಕಟ್ಟೆ ನಿರ್ವಹಣೆ ವಿಭಾಗದ ಮುಖ್ಯಸ್ಥ ರಿತುರಾಜ್ ಭಟ್ಟಾಚಾರ್ಯ ಹೇಳುತ್ತಾರೆ.

ಮ್ಯೋಗ್ನೆಟಿಕ್ ಕಾರ್ ರೇಸಿಂಗ್ ಟ್ರ್ಯಾಕ್, ಗೇಮ್‌ಗಳಿಗಾಗಿ ವಿಡಿಯೊ ವಾಲ್, ನಿಕೋ ರೋಸ್‌ಬರ್ಗ್ ಅವರಿಂದ ಸುರಕ್ಷಿತ ಚಾಲನೆ ಕುರಿತು ಸಲಹೆಗಳು, ಫಾರ್ಮುಲಾ ಒನ್ ಕುರಿತು ರಸಪ್ರಶ್ನೆ, ವಿಮೆ ಕುರಿತು ಮಾಹಿತಿ ಹೊಂದಿರುವ ಸಂಚಾರಿ ವಾಹನವು ಆಂದೋಲನದಲ್ಲಿ ಭಾಗವಹಿಸಲಿದೆ. ಜನರು ಮ್ಯೋಗ್ನೆಟಿಕ್ ಟ್ರ್ಯಾಕ್ ಮೂಲಕ ಸ್ಪೀಡ್‌ನ ಅನುಭವವನ್ನು ಪಡೆಯಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT