ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ ಕೊಡುಗೆಗಳು

Last Updated 25 ಫೆಬ್ರುವರಿ 2011, 18:45 IST
ಅಕ್ಷರ ಗಾತ್ರ

*57,630 ಕೋಟಿ ರೂಪಾಯಿ ಮೊತ್ತದ ಪ್ರಸ್ತಾಪ, 87 ಸಾವಿರ ಕೋಟಿ ರೂ. ವೆಚ್ಚ.
*ಹವಾನಿಯಂತ್ರಿತ ರೈಲುಗಳ ತಾಂತ್ರಿಕ ಉನ್ನತೀಕರಣ.
*ನಿರ್ವಸಿತರಿಗೆ ಮನೆ ನೀಡಲು ‘ಬೃಹತ್ ಹೋಜನೆ’

*ಪ್ರಯಾಣ ದರ, ಸರಕುಸಾಗಣೆ ಶುಲ್ಕ ಹೆಚ್ಚಳ ಇಲ್ಲ.
*3000 ಮಾನವ ಕಾವಲು ರಹಿತ ರೈಲ್ವೆ ಕ್ರಾಸಿಂಗ್ ರದ್ದತಿ
*ಪ್ಯಾಸೆಂಜರ್ ರೈಲುಗಳ ವೇಗ ಪ್ರತಿ ಗಂಟೆಗೆ 160 ರಿಂದ 200 ಕಿ.ಮೀ.ಗಳಿಗೆ ಏರಿಸಲು ಸಾಧ್ಯತ ಆಧ್ಯಯನ.

4ಟಿಕೆಟ್ ಕಾಯ್ದಿರಿಸು (ಬುಕಿಂಗ್)ಶುಲ್ಕದಲ್ಲಿ ಇಳಿಕೆ. ಹವಾನಿಯಂತ್ರಿತ ರೂ.10, ಇತರೆ ರೂ.5 ನಿಗದಿ.
*ರೈಲು ಆಧರಿತ ಕೈಗಾರಿಕೆಗಳ ಸ್ಥಾಪನೆ,  ಸಹ ಉದ್ದಿಮೆಗಳಿಗೆ  ಉತ್ತೇಕಜನ.

*ಇ-ಟೆಕೆಟ್‌ಗಾಗಿ ಹೊಸ ಜಾಲತಾಣ (ಪೋರ್ಟಲ್).
*2011-12ರಲ್ಲಿ 18,000  ಹೊಸ ರೈಲು ಬೋಗಿಗಳ ನಿರ್ಮಾಣ
* ಪ್ರತ್ಯೇಕ ಕ್ರೀಡಾ  ಶ್ರೇಣಿ ಹುದ್ದೆ ರಚನೆ.

*6ನೇ ವೇತನ ಆಯೋಗದ ಶಿಫಾರಸು ಜಾರಿಗಾಗಿ ಹೆಚ್ಚಿದ ವೆಚ್ಚದ ಹೊರೆ
*ದೇಶೀಯ ಸಂಚಾರಕ್ಕಾಗಿ ‘ಗೊ ಇಂಡಿಯ’ ಬಹೂಪಯೋಗಿ ಸ್ಮಾರ್ಟ್ ಕಾರ್ಡು

*‘ಹಿರಿಯನಾಗರಿಕರ ಸೌಲಭ್ಯ’ಕ್ಕಾಗಿ ವಯಸ್ಸು 60 ರಿಂದ 58ಕ್ಕೆ ಇಳಿಕೆ. % 30ರಿಂದ 40ಕ್ಕೆಸೌಲಭ್ಯ ಏರಿಕೆ. ಅಂಗವಿಕಲೆ, ಸಾಹಸ ಪ್ರಶಸ್ತಿ ಪುಸ್ಕೃತರಿಗೆ ರಾಜಧಾನಿ-ಶತಾಬ್ದಿ ರೈಲುಗಳಲ್ಲಿ  ಅವಕಾಶ.

*ಪತ್ರಕರ್ತರು-ಕುಟುಂಬಕ್ಕೆ ಶೇಕಡ 50ರ ರಿಯಾಯ್ತಿ ಪ್ರಯಾಣ ವರ್ಷಕ್ಕೆ ಒಂದು ಬಾರಿಯ ಬದಲು 2 ಬಾರಿ- ಕೊಡುಗೆ

*ರೈಲ್ವೆ ನೌಕರರ ಅವಲಂಬಿತರು, ಪೋಷಕರಿಗೆ ವೈದ್ಯಕೀಯ ಸೌಲಭ್ಯ.
*ಹೊಸ 56 ಎಕ್ಸ್‌ಪ್ರೆಸ್, 3 ಶತಾಬ್ದಿ, 9 ತುರಂತ್ ರೈಲುಗಳು

*ಡಿ-ದರ್ಜೆ ರೈಲ್ವೆ ನೌಕರರ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ   ಮಾಸಿಕ ರೂ.1200 ಶಿಷ್ಯವೇತನ. ನೌಕರರ ಮಕ್ಕಳಿಗೆ 20 ಹೊಸ ಹಾಸ್ಟೆಲ್‌ಗಳು.

*236 ಆದರ್ಶ್ ಸ್ಟೇಷನ್‌ಗಳು-ಮಾದರಿ ಸೇವೆ, ಮೇಲ್ದರ್ಜೆ ಏರಿಸುವಿಕೆ’
*‘ಪ್ರಧಾನ ಮಂತ್ರಿ ರೈಲ್ ವಿಕಾಸ ಯೋಜನೆ’ ಸಾಮಾಜಿಕ ಅಪೇಕ್ಷಿತ ಯೋಜನೆ,  ರದ್ದು ಆಗದ ಅನುದಾನ ನೀಡಿಕೆ.

*1.75 ಲಕ್ಷ ಉದ್ಯೋಗ ಅವಕಾಶ, 10 ವರ್ಷಗಳ ಬ್ಯಾಕ್‌ಲಾಗ್ ಮೀಸಲಾತಿ. 16000 ನಿವೃತ್ತ ಯೋಧರಿಗೆ ಅವಕಾಶ.

*ಅಪಘಾತ ತಡೆ ಸಾಧನ(ಎಸಿಡಿ)ಯನ್ನು 8 ರೈಲ್ವೆ ವಲಯಗಳಲ್ಲಿ ಅಳವಡಿಕೆ. ಜಿಪಿಎಸ್ ಆಧರಿತ ಮಂಜು-ಹೊಗೆ ನಿವಾರಕ ಸಾಧನ ಅಳವಡಿಕೆ.

*ಇಲಾಖೆಯಲ್ಲಿ 2011-12 ಅನ್ನು ‘ಹಸಿರು ಇಂಧನ ಬಳಕೆ ವರ್ಷ’ ಅನುಷ್ಠಾನ.
*ಸರಕು ಸಾಗಣೆಯಲ್ಲಿ 993 ಮೆ.ಟನ್, ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡ 6.4 ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT