ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಮಕ್ಕಳಿಗೆ ಶೈಕ್ಷಣಿಕ ವೇದಿಕೆ ಕೊಡಿ

Last Updated 19 ಜುಲೈ 2012, 8:45 IST
ಅಕ್ಷರ ಗಾತ್ರ

ಭಾಲ್ಕಿ: ಪ್ರತಿಭಾವಂತಿಕೆಗೆ ಬಡತನ ಅಡ್ಡಿಯಾಗಬಾರದು. ಆರ್ಥಿಕವಾಗಿ ಹಿಂದುಳಿದ ಮಕ್ಕಳ ಪ್ರತಿಭಾ ಪ್ರೋತ್ಸಾಹಕ್ಕಾಗಿ ಸೂಕ್ತ ವೇದಿಕೆಯನ್ನು ಒದಗಿಸಿ ಕೊಡಬೇಕು ಎಂದು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಷಡಕ್ಷರಿ ಹಿರೇಮಠ ನುಡಿದರು.

ಪಟ್ಟಣದ ಹನುಮಾನ ವಿದ್ಯಾ ಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಉಚಿತ ಸಮವಸ್ತ್ರ ವಿತರಣೆ ಮತ್ತು ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಮಾಣಿಕರಾವ ಧುರ್ವೆ ಮಾತನಾಡಿ, ಸಣ್ಣ ಸಣ್ಣ ಭಾಂಡೇ ವ್ಯಾಪಾರಿಗಳು ಸೇರಿ ಕಟ್ಟಿರುವ ಈ ಶಾಲೆಗೆ ಈಗ 34 ವರ್ಷಗಳು ಕಳೆದಿವೆ. ಬಡ ಮಕ್ಕಳ ಅಕ್ಷರಾಭ್ಯಾಸಕ್ಕಾಗಿ ಸದಾ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದರು. 

ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಶಿಕ್ಷಣ ರತ್ನ ಪ್ರಶಸ್ತಿ ಪಡೆದ ಶಿಕ್ಷಣ ಸಂಯೋಜಕ ಮಲ್ಲಿಕಾರ್ಜುನ ಹಲ್ಮಂಡಗೆ ಅವರನ್ನು ಸತ್ಕರಿಸಿ ಅಭಿನಂದಿಸಲಾಯಿತು.

ಸಿಆರ್‌ಪಿ ರಾಜಕುಮಾರ ಘಂಟೆ, ಉಮಾಕಾಂತ ಕಳಸೆ, ಸಂಸ್ಥೆ ಉಪಾಧ್ಯಕ್ಷ ದಶರಥರಾವ ಧುರ್ವೆ, ಕಾರ್ಯದರ್ಶಿ ಜನಾರ್ಧನರಾವ ವಾಕುಡೆ, ಮುಖ್ಯಗುರು ವೀರಶಟ್ಟಿ ಇಟಗೆ, ನಾಮದೇವರಾವ, ಭಗವಾನ ಟೊಂಪೆ, ಅರ್ಜುನರಾವ ಕೊಂಡಾಪುರೆ, ಭಾರತಬಾಯಿ, ಗೋವಿಂದರಾವ ಬಿರಾದಾರ, ಶ್ರೀಕಿಶನ ಧುಬೆ, ಸುಭಾಷ ಧುರ್ವೆ, ಮಾಧವರಾವ ರೇಣುಕೆ, ಜಗನ್ನಾಥ ಬಿರಾದಾರ, ಸಾವಿತ್ರಿ ಕಾಕನಾಳೆ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT