ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಶಿಕ್ಷಕರ ನಿವೇಶನಗಳ ಮೇಲೆ ಅಕ್ರಮ ಕಬ್ಜಾ!

Last Updated 11 ಫೆಬ್ರುವರಿ 2012, 5:35 IST
ಅಕ್ಷರ ಗಾತ್ರ

ಭಾಲ್ಕಿ: ಪಟ್ಟಣದ ದಾದರಾ ಬಳಿ ಇರುವ ಸರ್ವೆ ನಂ. 62/2,3,4 ಮತ್ತು 5ರಲ್ಲಿ ನ ಬಡ ಶಿಕ್ಷಕರಿಗೆ ಮಂಜೂರಾಗಿದ್ದ 173 ನಿವೇಶನಗಳ ಪೈಕಿ ಸುಮಾರು 50 ನಿವೇಶನಗಳ ಮೇಲೆ ಕೆಲವು ದುಷ್ಕರ್ಮಿಗಳು ಅಕ್ರಮವಾಗಿ ಕಬ್ಜಾ ಹಾಕಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ರಜಿಸ್ಟ್ರಿ ಕೂಡ ಮಾಡಿಸಿಕೊಂಡಿದ್ದಾರೆ ಎಂದು ದೂರಲಾಗಿದೆ.

ಇಂಥವರ ಮೇಲೆ ಸೂಕ್ತ ಕ್ರಮ ಜರುಗಿಸಲು ಕರ್ನಾಟಕ ರಕ್ಷಣಾ ವೇದಿಕೆಯ ಆಶ್ರಯದಲ್ಲಿ ಬಡ ಶಿಕ್ಷಕರು ನ್ಯಾಯಕ್ಕಾಗಿ ದಂಡಾಧಿಕಾರಿಗಳಿಗೆ ಆಗ್ರಹ ಪಡಿಸಿದರು.

ಸಂಘದ ಅಧ್ಯಕ್ಷ ಬಸವರಾಜ ಜೋಳದಾಪಕೆ, ಮಾಳಸ್ಕಾಂತ ವಾಘಮಾರೆ, ಶಿಕ್ಷಕ ಕಲ್ಲಪ್ಪ ವಗ್ಗೆ, ಸುರೇಶ ರಾಜಭವನ, ಎಂ.ಡಿ. ಶಫಿ, ಶಿವಾನಂದ, ಮದನ ಪಾಂಚಾಳ, ಶಶಿಕಾಂತ ಗುಂಗೆ, ಸುರೇಶ ಬೆಲ್ಲಾಳೆ, ಸತೀಶ ಅಡರಂಗೆ, ಅಗ್ನೀವೇಶ ವಿಶ್ವಕರ್ಮ, ಜ್ಞಾನೇಶ್ವರ ಕುಂಬಾರ, ಶ್ರೀದೇವಿ ಪಾಟೀಲ, ನರಸಿಂಗ್ ಮೇತ್ರೆ ಮುಂತಾದವರು ಇದ್ದರು. 

ಉಚಿತ ನೇತ್ರ ಚಿಕಿತ್ಸಾ ಶಿಬಿರ:
ರೋಟರಿ ಕ್ಲಬ್ ಆಫ್ ಭಾಲ್ಕಿ  ಫರ್ಟ್‌ನ ಸಂಯುಕ್ತಾಶ್ರಯದಲ್ಲಿ ತಾಲ್ಲೂಕಿನ ಭಾತಂಬ್ರಾದ ಸುಕಾಳೆ ಆಸ್ಪತ್ರೆ ಆವರಣದಲ್ಲಿ ಫೆ. 12ರಂದು ಮುಂಜಾನೆ 10:30ಕ್ಕೆ ಉಚಿತ ನೇತ್ರ ಚಿಕಿತ್ಸಾ ಶಿಬಿರ ನಡೆಯಲಿದೆ. ಮಾಜಿ ಶಾಸಕ ಪ್ರಕಾಶ ಖಂಡ್ರೆ ಉದ್ಘಾಟಿಸುವರು. ನೇತ್ರ ತಜ್ಞ ರಾಮಪ್ರಸಾದ ಲಖೋಟಿಯಾ, ಕ್ಲಬ್ ಅಧ್ಯಕ್ಷ ಡಾ. ವಸಂತ ಪವಾರ, ಡಾ. ಅನಿಲ ಸುಕಾಳೆ ಮತ್ತಿತರರು ಇರುವರು.           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT