ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಬಗ್ಗೆ ಕಾಳಜಿ ವಹಿಸಿ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬಡವರ ಪಾಲಿಗೆ ಪಡಿತರ ಚೀಟಿ ಮರೀಚಿಕೆಯಾಗಿದೆ. ಗ್ರಾಮೀಣ ಭಾಗದಲ್ಲಿ ಒಂದೇ ಮನೆಯಲ್ಲಿ  2-3 ಕುಟುಂಬಗಳು ವಾಸಿಸುತ್ತವೆ.

ಪಡಿತರ ಚೀಟಿಗಾಗಿ ಅರ್ಜಿ ಹಾಕಲು ಒಂದೇ ಕುಟುಂಬಕ್ಕೆ ಮಾತ್ರ ಅವಕಾಶವಿದೆ. ಉಳಿದ 2-3 ಕುಟುಂಬಗಳು ವಾಸ ಮಾಡುವ ಮನೆಗೆ ವಿದ್ಯುತ್ ಬಿಲ್, ಮನೆ ರಸೀದಿ ಇತ್ಯಾದಿಗಳು ಒಂದೇ ಇರುತ್ತವೆ.
 
ಉಳಿದ ಕುಟುಂಬಗಳು ಅವೇ ಬಿಲ್, ರಸೀದಿ ಬಳಸಿ ಅರ್ಜಿ ಹಾಕಲು ಹೋದರೆ ಗ್ರಾಮ ಪಂಚಾಯ್ತಿ  ಅಧಿಕಾರಿಗಳು ಅರ್ಜಿ ಸ್ವೀಕರಿಸುವುದಿಲ್ಲ. ಬೇರೆ ಬೇರೆ ಮನೆಗಳದೇ ಬೇಕೆಂದು ತಾಕೀತು ಮಾಡುತ್ತಾರೆ. ಇಂತಹ ಕುಟುಂಬಗಳು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಏನು ಮಾಡಬೇಕು ಎಂಬ ಬಗ್ಗೆ ಸರ್ಕಾರ ಚಿಂತಿಸಬೇಕಿದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT