ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಸೇವೆ ತೃಪ್ತಿ ತಂದಿದೆ: ವಂದನಾ

Last Updated 4 ಮೇ 2015, 10:57 IST
ಅಕ್ಷರ ಗಾತ್ರ

ಮಾನ್ವಿ: 25ವರ್ಷಗಳಿಂದ ಬಡಜನರ ಸೇವೆಯಲ್ಲಿ ತೊಡಗಿರುವುದು ಸಂತೃಪ್ತಿ ತಂದಿದೆ ಎಂದು ಸಿಸ್ಟರ್ ವಂದನಾ ಎಲಿಜಬೆತ್ ಹೇಳಿದರು.

ಶುಕ್ರವಾರ ಪಟ್ಟಣದ ಕೋನಾಪುರ­ಪೇಟೆಯ ಸೇಂಟ್ ಮೇರಿಸ್ ಚಚರ್ನಲ್ಲಿ ಪಾಲನಾ ಮಂಡಳಿ ಹಾಗೂ ಭಕ್ತಾದಿ­ಗಳಿಂದ ಹಮ್ಮಿಕೊಳ್ಳಲಾಗಿದ್ದ ಗುರು­ದೀಕ್ಷೆಯ ಬೆಳ್ಳಿಹಬ್ಬದ ಅಭಿನಂದನಾ ಸಮಾರಂಭದಲ್ಲಿ  ಮಾತನಾಡಿದರು.

ಸೇಂಟ್ ಮೇರಿಸ್ ಚರ್ಚ, ಪಾಲನಾ ಮಂಡಳಿ ಹಾಗೂ ಭಕ್ತಾದಿಗಳಿಂದ ಕಳೆದ 25ವರ್ಷಗಳಿಂದ ಗುರುದೀಕ್ಷೆ ಪಡೆದು ನಿರಂತರವಾಗಿ  ಸೇವೆಯಲ್ಲಿ ಗುರುತಿಸಿ­ಕೊಂಡಿರುವ ಫಾದರ್ ಭಗವಂತ್ರಾಜ್, ಫಾದರ್ ಪೌಲರಾಜ್, ಸಿಸ್ಟರ್ ವಂದನಾ ಎಲಿಜಬೆತ್, ಫಾದರ್ ಎನ್.ಅರಳಯ್ಯ, ಫಾದರ್ ಮೌಲ್ಮೋರಸ್ ಅವರನ್ನು ಸತ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ಸಿಸ್ಟರ್ ಪುಷ್ಪಾ ಜಾನಪ್ಪ ಜಗ್ಲಿ ಹಾಗೂ ಸಿಸ್ಟರ್ ವೆಲ್ಸಾ ಅವರನ್ನು ಸನ್ಮಾನಿಸ­ಲಾಯಿತು.

ಪಾಲನಾ ಮಂಡಳಿ ಉಪಾಧ್ಯಕ್ಷೆ ದಾನಮ್ಮ ಪಿ.ಪತ್ರೆಪ್ಪ, ಕಾರ್ಯದರ್ಶಿ ಪ್ರವೀಣಕುಮಾರ ಮತ್ತಿತರರು ಇದ್ದರು
ಸುಮಾ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಪಿ.ಪರಮೇಶ ಹಾಗೂ ತಾಯಪ್ಪ ಬಿ.ಹೊಸೂರು ನಿರೂಪಿಸಿದರು. ಕೆ.ಎಂ.ಲಾರೆನ್ಸ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT