ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ಡಿ ದರ ಇಳಿಸಲು ಅಸೋಚಾಂ ಆಗ್ರಹ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಣದುಬ್ಬರ ಗಣನೀಯ ಇಳಿಕೆ ಕಂಡಿರುವ ಹಿನ್ನೆಲೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಲ್ಪಾವಧಿ ಬಡ್ಡಿ ದರ (ರೆಪೊ) ಮತ್ತು ನಗದು ಮೀಸಲು ಅನುಪಾತ (ಸಿಸಿಆರ್) ತಗ್ಗಿಸಬೇಕು ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಆಗ್ರಹಿಸಿದೆ.

ರೆಪೊ ದರವನ್ನು ಶೇ 0.5ರಷ್ಟು ಮತ್ತು  `ಸಿಸಿಆರ್~ ಅನ್ನು ಶೇ 1ರಷ್ಟು ಇಳಿಸಬೇಕು ಎಂದು `ಅಸೋಚಾಂ~ ಹೇಳಿದೆ.  `ಸಿಸಿಆರ್~ ತಗ್ಗಿಸುವುದರಿಂದ  ಬ್ಯಾಂಕಿಂಗ್ ಕ್ಷೇತ್ರದ ನಗದು ಲಭ್ಯತೆ ಪ್ರಮಾಣ ಹೆಚ್ಚಲಿದ್ದು, ಹೆಚ್ಚುವರಿಯಾಗಿ ್ಙ56 ಸಾವಿರ ಕೋಟಿ ಬಂಡವಾಳ ಮಾರುಕಟ್ಟೆಗೆ ಹರಿದು ಬರಲಿದೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT