ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ಡಿ ದರ ಏರಿಕೆ: ಪೇಟೆಯಲ್ಲಿ ಒತ್ತಡ

Last Updated 22 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್‌ ಅನಿರೀಕ್ಷಿತವಾಗಿ ಬಡ್ಡಿ ದರ ಏರಿಕೆ ಮಾಡಿರುವುದು ಹೂಡಿಕೆದಾ­ರರಲ್ಲಿ ಆತಂಕ ಮತ್ತು ಗೊಂದಲ ಮೂ­ಡಿಸಿದ್ದು, ಈ ವಾರವೂ ಪೇಟೆಯಲ್ಲಿ ಕುಸಿತ ಕಾಣಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ವಾಣಿಜ್ಯೋದ್ಯಮ ಸಂಸ್ಥೆಗಳು ‘ಆರ್‌ಬಿಐ’ನ ಬಿಗಿ ಹಣಕಾಸು ನೀತಿಯನ್ನು ಟೀಕಿಸಿವೆ. ಇದರ ಪರಿಣಾಮ ಈ ವಾರ ಪೇಟೆಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಬೊನಾಂಜಾ ಪೋರ್ಟ್‌ಪೊಲಿ­ಯೊ ಸಂಸ್ಥೆಯ ಉಪಾಧ್ಯಕ್ಷ ರಾಕೇಶ್‌ ಗೋಯಲ್‌ ಅಭಿಪ್ರಾಯಪಟ್ಟಿದ್ದಾರೆ. 

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೆ.1ರಿಂದ 15ರವರೆಗೆ ಷೇರುಪೇಟೆಯಲ್ಲಿ  ₨11 ಸಾವಿರ ಕೋಟಿ ಬಂಡವಾಳ ತೊಡಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT