ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ಡಿ ಶೇ 1ರಷ್ಟು ಇಳಿಕೆ?

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಇತರ ವಾಣಿಜ್ಯ ಬ್ಯಾಂಕ್‌ಗಳು ಬಡ್ಡಿ ದರಗಳನ್ನು ಇಳಿಸುವ ಸಾಧ್ಯತೆ ಇರುವುದರಿಂದ ವಾಹನ ಮತ್ತು ಗೃಹ ಸಾಲ ಬಡ್ಡಿ ದರಗಳು ಮುಂಬರುವ ದಿನಗಳಲ್ಲಿ ಶೇ 1ರಷ್ಟು ಕಡಿಮೆಯಾಗುವ ಸಾಧ್ಯತೆಗಳು ಇವೆ.

ಹಣದುಬ್ಬರ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಬಡ್ಡಿ ದರಗಳು ಇಳಿಯುವ ಲಕ್ಷಣಗಳು ಕಂಡು ಬಂದಿವೆ. ಬಡ್ಡಿ ದರ ಇಳಿಕೆ ಶೇ 1ರಷ್ಟು ಇರಬಹುದು ಎಂದು ಬ್ಯಾಂಕ್ ಮುಖ್ಯಸ್ಥರು ಮತ್ತು ಮಾರುಕಟ್ಟೆ ಪರಿಣತರು ಅಂದಾಜಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಇದೇ 24ರಂದು ತನ್ನ ಹಣಕಾಸು ನೀತಿಯ ಮೂರನೇ ತ್ರೈಮಾಸಿಕದ ಪರಾಮರ್ಶೆ ಸಂದರ್ಭದಲ್ಲಿ  ಬಡ್ಡಿ ದರ ಇಳಿಸಬೇಕು ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿಯೂ  ಅಭಿಪ್ರಾಯಪಟ್ಟಿದೆ.
ಮುಂಬರುವ ದಿನಗಳಲ್ಲಿ ಬಡ್ಡಿ ದರಗಳು ಇಳಿಯುವ ಸಾಧ್ಯತೆ ಖಂಡಿತವಾಗಿಯೂ ಹೆಚ್ಚಿದೆ ಎಂದು ಯೂನಿಯನ್ ಬ್ಯಾಂಕ್ ಅಧ್ಯಕ್ಷ ಎಂ. ವಿ. ನಾಯರ್ ತಿಳಿಸಿದ್ದಾರೆ.

ಹಣದುಬ್ಬರವು ನಿಯಂತ್ರಣಕ್ಕೆ ಒಳಪಟ್ಟರೆ,  ಕಠಿಣ ಹಣಕಾಸು ನೀತಿ ಕೈಬಿಡುವುದಾಗಿ `ಆರ್‌ಬಿಐ~ ತನ್ನ ಡಿಸೆಂಬರ್ ತಿಂಗಳ ಹಣಕಾಸು ನೀತಿ ಪರಾಮರ್ಶೆ ಸಂದರ್ಭದಲ್ಲಿಯೇ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT