ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದ ಬೆಳಕು

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ಬರಹ ಪಬ್ಲಿಷಿಂಗ್ ಹೌಸ್: ಭಾನುವಾರ ಪ್ರೊ.ಕೆ. ಮರುಳಸಿದ್ಧಪ್ಪ ಅವರಿಂದ ವೃತ್ತಿರಂಗಭೂಮಿ ಕಲಾವಿದ ದಿ.ಬಿ.ಎನ್.ಚಿನ್ನಪ್ಪ ಅವರ ಆತ್ಮಕಥೆ `ಬಣ್ಣದ ಬೆಳಕು~ ಕೃತಿ ಲೋಕಾರ್ಪಣೆ.

ಕನ್ನಡ ವೃತ್ತಿ ರಂಗಭೂಮಿಯಲ್ಲಿ ತಮ್ಮ ವಿಶಿಷ್ಟ ಅಭಿನಯ, ಗಾಯನದಿಂದ ಜನಪ್ರಿಯರಾಗಿದ್ದ ದಿವಂಗತ ಬಿ.ಎನ್. ಚಿನ್ನಪ್ಪರವರ ಜನ್ಮ ಶತಮಾನೋತ್ಸವದ ವರ್ಷವಿದು. ಬಡತನದ ಬದುಕಿನಿಂದ ಬಿಡುಗಡೆಯಾಗಲು ಬಾಲ್ಯದಲ್ಲೇ ಗುಬ್ಬಿ ಕಂಪೆನಿ ಸೇರಿದ ಅವರು ಅಪಾರ ಪರಿಶ್ರಮದಿಂದ ನುರಿತ ನಟರಾಗಿ ರೂಪುಗೊಂಡವರು. ಗುಬ್ಬಿ ಕಂಪೆನಿ, ಹಿರಣ್ಣಯ್ಯನವರ ಮಿತ್ರ ಮಂಡಳಿಯಿಂದ ಹಿಡಿದು ಅನೇಕ ವೃತ್ತಿ ರಂಗಭೂಮಿಗಳಲ್ಲಿ ಕಲಾವಿದರಾಗಿ ಜನಮನ್ನಣೆ ಗಳಿಸಿದ ಅವರು ಅಂತಿಮವಾಗಿ ಆಕಾಶವಾಣಿ ಕಲಾವಿದರಾಗಿ ಬದುಕನ್ನು ಸಾರ್ಥಕಪಡಿಸಿಕೊಂಡವರು.

1960ರ ದಶಕದಲ್ಲಿ ಸುಧಾ ವಾರಪತ್ರಿಕೆಯಲ್ಲಿ ಅವರ ಆತ್ಮಕತೆ `ಬಣ್ಣದ ಬೆಳಕು~ ಧಾರಾವಾಹಿಯಾಗಿ ಪ್ರಕಟವಾಯಿತು. ಅನಂತರ ಗಾಂಧಿ ಸಾಹಿತ್ಯ ಸಂಘವು ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿತು. ಇದೀಗ ಬರಹ ಪಬ್ಲಿಷಿಂಗ್ ಹೌಸ್ ಮೂಲಕ ಮರುಮುದ್ರಣ ಕಂಡಿದೆ.

ಕೃತಿ ಕುರಿತು: ಡಾ.ಕೆ. ಪುಟ್ಟಸ್ವಾಮಿ. ಅತಿಥಿಗಳು: ಡಾ.ಹೊ.ಶ್ರೀನಿವಾಸಯ್ಯ, ಬಿ.ಎನ್.ಗುರುಮೂರ್ತಿ.ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ. ಬೆಳಿಗ್ಗೆ11.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT