ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ಕೆರೆಗಳಿಗೆ ನೀರು ಹರಿಸಿ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ತಿಪಟೂರು ತಾಲ್ಲೂಕಿನ ಹೊನ್ನವಳ್ಳಿಯ ಸುತ್ತಲಿನ ಸುಮಾರು ಕೆರೆಗಳಿಗೆ ಸರ್ಕಾರದ ನಿಯಮಾನುಸಾರ ಹೇಮಾವತಿ ನಾಲೆಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸುವ ಕಾರ್ಯಕ್ರಮ ಚಾಲನೆಯಾಗಿ 2 ವರ್ಷಗಳಾಗಿವೆ.

ಕೆಲಸ ಪೂರ್ಣಗೊಂಡಿದ್ದು ಪೈಪುಗಳ ಅಳವಡಿಕೆಯೂ ಕೂಡ ನಡೆದುಹೋಗಿದೆ. ಆದರೆ ಇದುವರೆವಿಗೂ ಕೂಡ ಈ ಭಾಗದ ಯಾವ ಕೆರೆಗೂ ಒಂದು ಹನಿ ನೀರೂ ಬಂದಿಲ್ಲ.

ಇದೀಗ ಚುನಾವಣೆ ಸನ್ನಿಹಿತವಾಗುತ್ತಿರುವ ಸಂದರ್ಭದಲ್ಲಿ ತಾಲ್ಲೂಕಿನ ಹಾಲಿ ಶಾಸಕರು, ಸಂಸದರು, ಮತ್ತು ಮಾಜಿ ಶಾಸಕರುಗಳ ನಡುವಿನ ರಾಜಕೀಯ ಲೆಕ್ಕಾಚಾರದ ಪ್ರತಿಷ್ಠೆಗಳಿಂದ ಕಾಮಗಾರಿ ಮುಗಿದಿದ್ದರೂ ಅನೇಕ ತೊಡಕುಗಳಿಂದ

ಸ್ಥಗಿತಗೊಂಡಿದ್ದು ಸತತ ತೀವ್ರ ಬರಗಾಲದಿಂದ ಕಂಗಾಲಾಗಿರುವ ಇಲ್ಲಿನ ರೈತರ- ಜಾನುವಾರುಗಳ ಕುಡಿಯುವ ನೀರಿನ ಹಾಹಾಕಾರ ಹೇಳತೀರದಾಗಿದೆ ರಾಜಕೀಯ ಮುಖಂಡರು ಸ್ವಪ್ರತಿಷ್ಠೆ ಬಿಟ್ಟು ಜನಸಾಮಾನ್ಯರ ಕಷ್ಟದ ಬಗ್ಗೆ ಗಮನ ಹರಿಸುತ್ತಾರಾ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT