ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿರುವ ಕೆರೆಗಳಿಗೆ ನೀರು ತುಂಬಿಸಿ

ಅಕ್ಷರ ಗಾತ್ರ

ರಾಜ್ಯದಲ್ಲಿನ ಜಲಾಶಯದಲ್ಲಿ ಪೋಲಾಗುವ ನೀರನ್ನು ಎಲ್ಲಾ ಕೆರೆ ಕಟ್ಟೆಗಳಿಗೆ ತುಂಬಿಸಿ, ಪುಣ್ಯ ಕಟ್ಟಿಕೊಳ್ಳಿ. ಕೇವಲ ರಾಜಕೀಯ ಮಾಡಿ ರಾಜ್ಯದಲ್ಲಿ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಸ್ಥಿತಿ ಬಂದಿದೆ. ಯಾವುದೇ ರಾಜಕೀಯ ಮಾಡದೆ, ರೈತರು ಮತ್ತು ಜಾನುವಾರುಗಳಿಗೆ ನೀರೊದಗಿಸಲು ಕೆರೆ ಕಟ್ಟೆಗಳನ್ನು ಕೂಡಲೇ ತುಂಬಿಸಬೇಕು.

ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿ ಹೋಬಳಿ ವ್ಯಾಪ್ತಿಯ 8 ಹಳ್ಳಿಗಳಲ್ಲಿ 20 ವರ್ಷದಿಂದ ಯಾವ ಕೆರೆ ಕಟ್ಟೆಯಲ್ಲೂ ನೀರಿಲ್ಲ. ಇದರಿಂದ ರೈತರು ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ.  ಕುಡಿಯುವ ನೀರಿಗೂ ಬಹಳ ತೊಂದರೆಯಾಗಿದೆ. ಜಾನುವಾರುಗಳಿಗೆ ಮೇವಿಲ್ಲ. ಹೇಮಾವತಿ ಕಾಲುವೆ ಹಾದುಹೋಗಿದೆ. ಏತ ನೀರಾವರಿಗೆ ಕಾಲುವೆ ಮಾಡಿ ಸುಮಾರು 10 ವರ್ಷ ಕಳೆದಿದೆ. ಇನ್ನೂ ನೀರು ಬಿಟ್ಟಿಲ್ಲ. (ಹಳ್ಳಿಗಳು: ಚೌಡೇನಹಳ್ಳಿ, ಕಲ್ಕೆರೆ, ಜಂಬೂರು, ಹತ್ತಿಹಳ್ಳಿ, ತೆಂಕನಹಳ್ಳಿ, ಸಪ್ಪಿನಹಳ್ಳಿ, ದೇವಿಗೆರೆ, ಸಾತೇನಹಳ್ಳಿ....)  ತೆಂಗಿನ ಮರಗಳು ಒಣಗಿವೆ. ಈ ಹಳ್ಳಿಗಳ ಬಗ್ಗೆ ಕೂಡಲೇ ಗಮನಹರಿಸಿ, ಜನ, ಜಾನುವಾರುಗಳ ಸಂಕಷ್ಟ ನಿವಾರಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT