ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನಲ್ಲಿ ಸಹಜತೆ ಆಚರಣೆಗೆ ಸಲಹೆ

Last Updated 4 ಡಿಸೆಂಬರ್ 2012, 5:04 IST
ಅಕ್ಷರ ಗಾತ್ರ

ದಾವಣಗೆರೆ: ಹಲವು ವಿಸ್ಮಯಗಳ ಆಗರವಾಗಿರುವ ಅಂತರಂಗ ಶುದ್ಧಿಗೆ ಸಹಜತೆ ಆಚರಣೆಗೆ ತರಬೇಕು ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಸಲಹೆ ನೀಡಿದರು.

ವಿರಕ್ತಮಠದ ಬಸವ ಕೇಂದ್ರ, ಶ್ರೀಜಗದ್ಗುರು ಮುರುಘಾರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ವತಿಯಿಂದ ಸೋಮವಾರ ಬಸವ ಜಯಂತಿ ಶತಮಾನೋತ್ಸವ ಆಚರಣೆ ಅಂಗವಾಗಿ ಶಿವಯೋಗಾಶ್ರಮದಲ್ಲಿ ಏರ್ಪಡಿಸಿದ್ದ `ಶರಣ ಸಂಗಮ' ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಸಹಜತೆ ಇದ್ದಲ್ಲಿ ಬದುಕಿನ ಸೌಂದರ್ಯ ಇರುತ್ತದೆ. ಕೃತಕವಾಗಿ ಮಾಡಿದ್ದು ಕ್ಷಣಿಕ; ಸಹಜವಾಗಿರುವುದು ಶಾಶ್ವತ. ದುರಾಲೋಚನೆಯಿಂದ ಕೃತಕತೆ ಬರುತ್ತದೆ. ಸದ್ಭಾವನೆಯಿಂದ ಸಹಜತೆ ಹುಟ್ಟುತ್ತದೆ ಎಂದು ಹೇಳಿದರು.

ಕೃತಕತೆ ವರ್ಸಸ್ ಸಹಜತೆ ವಿಷಯ ಕುರಿತು ಮಾತನಾಡಿದ ಈಶ್ವರಮ್ಮ ಪ್ರೌಢಶಾಲೆ ಶಿಕ್ಷಕ ಜಗನ್ನಾಥ ನಾಡಿಗೇರ್, ಪುಸ್ತಕದಿಂದ ಪಡೆಯುವ ಜ್ಞಾನ ಕೃತಕ; ಅನುಭವದಿಂದ ಸಿಗುವ ಜ್ಞಾನ ಸಹಜತೆ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಲತಾ ತೇಜಸ್ವಿ ಪಟೇಲ್ ಮಾತನಾಡಿದರು.

ಚಿಂತಕ ಪ್ರೊ.ಎಸ್.ಎಸ್. ಪಟೇಲ್ ಮಾತನಾಡಿ, ಮನುಷ್ಯರಲ್ಲಿ ಸಹಜವಾಗಿ ಇರುವವರೆಂದರೆ ಮಗು ಮಾತ್ರ. ಕೃತಕತೆಗೆ ನಮ್ಮ ಸಮಾಜವೇ ಕಾರಣ. ಜೀವನದಲ್ಲಿ ನಿತ್ಯ ಸತ್ಯವನ್ನೇ ಆಡಿದವರೆಂದರೆ ಅವರು ಗಾಂಧೀಜಿ. ಅವರ ಬಳಿ ಕೃತಕತೆ ಕಾಣಲು ಸಾಧ್ಯವಿಲ್ಲ. ಅನಿಸಿದ್ದೆಲ್ಲವನ್ನೂ ಜೀವನಚರಿತ್ರೆಯಲ್ಲಿ ಬರೆದರು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT