ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನವಾಸಿಗೆ ಬರಬೇಡಿ

Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

ಕದಂಬರ ರಾಜಧಾನಿಯಾಗಿದ್ದ, ಪಂಪನು ಹಾಡಿ­­ಹೊಗಳಿದ ಬನವಾಸಿಯನ್ನು ನೋಡಲು ಜನ ಆಸಕ್ತಿಯಿಂದ ಬರುತ್ತಾರೆ. ಆದರೆ ನಾವು ಈ ಜನ­ರಲ್ಲಿ ಬೇಡಿಕೊಳ್ಳುವುದೇನೆಂದರೆ ದಯ ವಿಟ್ಟು ನೀವು ಬನವಾಸಿಗೆ ಬರುವ ಸಾಹಸ ಮಾಡ­­ಬೇಡಿ. ಯಾಕೆಂದರೆ ಶಿರಸಿಯಿಂದ ಬನವಾ­ಸಿಗೆ ಹೋಗುವ 24 ಕಿ.ಮೀ. ರಸ್ತೆ ಮಾಯ­ವಾಗಿದೆ. ಅಲ್ಲಿ ಕೇವಲ ಮನುಷ್ಯ ಮತ್ತು ವಾಹನಗಳು ಮಾಯವಾಗಬಲ್ಲ ಹೊಂಡ ಗಳದ್ದೇ  ಸಾಮ್ರಾಜ್ಯ.

ಈ ಹೊಂಡಗಳನ್ನು ಕದಂಬೋತ್ಸವ ಸಮಯ­ದಲ್ಲಿ ತ್ಯಾಪೆ ಹಾಕಿ ಮುಚ್ಚುತ್ತಾರೆ. ಕೆಲವೇ ದಿನಗಳಲ್ಲಿ ಪುನಃ ಹೊಂಡ ಹಿಂದಿನಂತೆ ಸಿದ್ಧ. ಕದಂಬೋತ್ಸವಕ್ಕೆ ಬರುವ ವಿಚಾರವಿದ್ದಲ್ಲಿ ಎರಡು ಬಾರಿ ಯೋಚಿಸಿ. ನಮ್ಮವರೇ ಆದ (ಆರ್‌.ವಿ. ದೇಶಪಾಂಡೆ) ಪ್ರವಾಸೋದ್ಯಮ ಮಂತ್ರಿ, ಈ ರಸ್ತೆ ಆಗ­ಬಾರದೆಂದು ಕಳೆದ 25 ವರ್ಷ­ಗಳಿಂದ ಪ್ರಯತ್ನ ನಡೆಸಿ ಸಫಲರಾ ಗಿದ್ದಾರೆ. ಈ ಕ್ಷೇತ್ರದ ಶಾಸಕ (ಶಿವರಾಮ್‌ ಹೆಬ್ಬಾರ್‌) ಈ ರಸ್ತೆಗಿಂತ ಕ್ಷೇತ್ರದ ಇತರ ರಸ್ತೆ­ಗಳೇ ಮುಖ್ಯ ಎಂದು ನುಣುಚಿಕೊಳ್ಳುತ್ತಾರೆ.

ನಿಮ್ಮ ಹಾಗೂ ನಿಮ್ಮ ವಾಹನದ ಆರೋಗ್ಯದ ರಕ್ಷಣೆ ಆಗಬೇಕೆಂದಲ್ಲಿ ದಯಮಾಡಿ ಬನವಾ ಸಿಗೆ ಬರಬೇಡಿ ಎಂದು ನಮ್ಮ ವಿನಂತಿ.ಹಾಗೆಯೇ ಕಳೆದ ಮೂರು ದಶಕಗಳಿಂದ ಈ ರಸ್ತೆ ಆಗದ ಹಾಗೆ ಸಫಲವಾಗಿ ಶ್ರಮಿಸಿದ ಉತ್ತರ ಕನ್ನಡ ಜನಪ್ರತಿನಿಧಿಗಳಿಗೆ ಹಾರ್ದಿಕ ಅಭಿನಂದನೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT