ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನಶಂಕರಿ ರಥೋತ್ಸವ

Last Updated 10 ಜನವರಿ 2012, 10:05 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಪಟ್ಟಣದಲ್ಲಿ ಸೋಮ ವಾರ ಸಂಜೆ ಶ್ರೀ ಬನಶಂಕರಿ ದೇವಿಯ ಜಾತ್ರೆ ಸಾವಿರಾರು ಸದ್ಭಕ್ತರ ಸಮ್ಮುಖದಲ್ಲಿ ನಡೆಯಿತು.

ಭಾನುವಾರ ರಾತ್ರಿ ಅಗ್ಗಿ ಹಾಯುವ ಕಾರ್ಯದಲ್ಲಿ ನೂರಾರು ಸದ್ಭಕ್ತರು ಬೆಂಕಿಯ ಕೆಂಡದಲ್ಲಿ ಹಾಯುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಪೂರೈಸಿದರು.

ಸೋಮವಾರ ಬೆಳಿಗ್ಗೆ ಶ್ರೀ ಬನಶಂಕರಿ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ಅರ್ಚಕ ಸುರೇಶ ಗುಡ್ಡದ ನೆರವೇರಿಸಿದರು. ಶಿರೋಳ ದಿಂದ ರಥದ ಹಗ್ಗವನ್ನು ಮೆರವಣಿ ಗೆಯ ಮೂಲಕ ತರಲಾಯಿತು. ರಥದ ಕಳಸವನ್ನು ಸಿಮೆಂಟ್ ರಸ್ತೆಯಲ್ಲಿರುವ ಪ್ಯಾಟಿಗೌಡ್ರ ನಿವಾಸದಿಂದ ಮುತ್ತೈದೆ ಯರ ಕಳಸ ಕನ್ನಡಿಯ ಮೆರವಣಿಗೆ ಯಲ್ಲಿ ಬನಶಂಕರಿ ದೇಗುಲಕ್ಕೆ ತರಲಾ ಯಿತು. ರಥಕ್ಕೆ ಪೂಜೆ ಸಲ್ಲಿಸಿದ ನಂತರ ತೇರಿಗೆ ಕಳಸ ಏರಿಸಲಾಯಿತು.
ರಥೋತ್ಸವಕ್ಕೆ ಮುಂಚೆ ನಡೆದ ಪಲ್ಲಕ್ಕಿ ಉತ್ಸವದಲ್ಲಿ ದೇವಿಯ ಮೂರ್ತಿ ಯನ್ನು ಇಟ್ಟು ಮೆರೆಸಲಾಯಿತು. ಐದು ದಿನಗಳ ಸಂಜೆ ಹುಚ್ಚಯ್ಯನ ತೇರು ಎಳೆಯುತ್ತಿದ್ದ ಸದ್ಭಕ್ತರು ಸೋಮವಾರ ಸಂಜೆ ಶ್ರೀ ಬನಶಂಕರಿ ದೇವಿಯ ದೊಡ್ಡ ರಥವನ್ನು ಎಳೆಯುವ ಮೂಲಕ ಹಾಗೂ ಅದಕ್ಕೆ ಉತ್ತತ್ತಿ ಬಾಳೆ ಹಣ್ಣು ಎಸೆಯುವ ಮೂಲಕ ಧನ್ಯತೆ ಮೆರೆದರು. ರಥೋತ್ಸವದಲ್ಲಿ  ಶ್ರೀ ಬನಶಂಕರಿದೇವಿ ಯುವಕ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT