ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನಿ ಹಾಡೋಣ ಕವಿತೆಯ...

Last Updated 1 ಜೂನ್ 2011, 19:30 IST
ಅಕ್ಷರ ಗಾತ್ರ

ಜೆ.ಪಿ.ನಗರದಲ್ಲಿರುವ ಸಂಗೀತಧಾಮ ಸಂಸ್ಥೆಯು ಮೃತ್ಯುಂಜಯ ದೊಡ್ಡವಾಡ್ ಅವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ `ಬನ್ನಿ ಹಾಡೋಣ ಕವಿತೆಯ~ ರಾಜ್ಯಮಟ್ಟದ ಸುಗಮ ಸಂಗೀತ ಶಿಬಿರ ಯಶಸ್ವಿಯಾಗಿ ನಡೆಯಿತು.

ಖ್ಯಾತ ಹಿಂದುಸ್ತಾನಿ ಗಾಯಕ ಶ್ರೀಮಂತ ಆವಟಿ, ಕವಿ ಕಾ.ವೆಂ. ಶ್ರೀನಿವಾಸಮೂರ್ತಿ, ಬಾಗೂರು ಮಾರ್ಕಂಡೇಯ ಹಾಗೂ ಗಾಯಕಿ ಜ್ಯೋತಿ ರವಿ ಪ್ರಕಾಶ್ ಶಿಬಿರ ಉದ್ಘಾಟಿಸಿದರು. ನಂತರ ಮೃತ್ಯುಂಜಯ ದೊಡ್ಡವಾಡ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಭಾವಗೀತೆಗಳನ್ನು ಶಿಬಿರಾರ್ಥಿಗಳು ಟ್ರ್ಯಾಕ್‌ನೊಂದಿಗೆ ಅಭ್ಯಾಸ ನಡೆಸಿದರು.

ಬಾಗೂರು ಮಾರ್ಕಂಡೇಯ ಅವರ `ಬಗೆ ಬಗೆ ಬಣ್ಣದ~, ಬಿ.ಆರ್.ಲಕ್ಷ್ಮಣ್‌ರಾವ್ ಅವರ `ಕಾಯುತ್ತಾ ಕೂರುವುದೇ~, ಚೆನ್ನವೀರ ಕಣವಿ ಅವರ `ಎಳ್ಳೀಗೆ, ಎಣ್ಣೀಗೆ~ ಕಾ.ವೆಂ.ಶ್ರೀನಿವಾಸಮೂರ್ತಿ ಅವರ `ಬೆಳ್ಳಿ ಬಾನಲ್ಲಿ~ ಗೀತೆಗಳನ್ನು ಶಿಬಿರಾರ್ಥಿಗಳಿಗೆ ಕಲಿಸಿಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT