ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೂರು ಬಂದ್: ಪ್ರಯಾಣಿಕರ ಪರದಾಟ

Last Updated 7 ಅಕ್ಟೋಬರ್ 2012, 8:25 IST
ಅಕ್ಷರ ಗಾತ್ರ

ತಿ.ನರಸೀಪುರ: `ಕರ್ನಾಟಕ ಬಂದ್~ ಕರೆಗೆ ತಾಲ್ಲೂಕಿನ ಬನ್ನೂರು ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಶ್ರೀ ಹೇಮಾದ್ರಂಬ ಆಟೊ ಸಂಘಟನೆಯ ಪ್ರಮುಖರು ಪಟ್ಟಣದ ಎಸ್‌ಆರ್‌ಪಿ ರಸ್ತೆ, ಬಸ್ ನಿಲ್ದಾಣ ಹಾಗೂ ಮೈಸೂರು - ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಬೈಕ್- ಆಟೊ ರ‌್ಯಾಲಿ ನಡೆಸಿದರು. ಪ್ರತಿಭಟನೆಯ ವೇಳೆ ತಮಿಳುನಾಡಿನ ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಡಿಸಿದರು.

ಬನ್ನೂರಿನ ಸಂತೆಮಾಳದ ಅಂಗಡಿಗಳು ಸೇರಿದಂತೆ ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬಸ್ ನಿಲ್ದಾಣದಲ್ಲಿ ಬಸ್‌ಗಳ ಸಂಚಾರವಿಲ್ಲದೇ ಬಿಕೊ ಎನ್ನುತ್ತಿತ್ತು.

ಕಬಿನಿ ನಾಲೆ ಬಳಿ ಪ್ರತಿಭಟನೆ
ವರುಣಾ ವಿಧಾನಸಭಾ ಕ್ಷೇತ್ರದ ಕಲ್ಕುಂದ ಗ್ರಾಮದಲ್ಲಿ ಕಬಿನಿ ನೀರು ಬಳಕೆದಾರರ ಸಹಕಾರ ಸಂಘ, ಭುವನೇಶ್ವರಿ ಸ್ನೇಹ ಬಳಗ, ವಿನಾಯಕ ಯುವಕರ ಬಳಗ ಹಾಗೂ ಕೂಲಿ ಕಾರ್ಮಿಕರು, ರೈತರು ಕಬಿನಿ ನಾಲೆಯ ಬಳಿಪ್ರತಿಭಟನೆ ನಡೆಸಿದರು.

ಗ್ರಾಮದ ಎಲ್ಲ ಅಂಗಡಿ, ಹೋಟೆಲ್‌ಗಳನ್ನು ಮುಚ್ಚಿಸಿ ನಂತರ ಗ್ರಾಮದ ಸಮೀಪ ಹಾದು ಹೋಗಿರುವ ಕಬಿನಿ ನಾಲೆಯ ಬಳಿ ತೆರಳಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಕಬಿನಿ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ರತ್ನಶೇಖರ್, ಭುವನೇಶ್ವರಿ ಸ್ನೇಹ ಬಳಗದ ಶಿವರಾಜು, ವಿನಾಯಕ ಯುವಕರ ಬಳಗದ ಪುನೀತ್, ಸದುಕುಮಾರ್, ಧರ್ಮ, ವರ್ತಕರ ಸಂಘದ ಅಧ್ಯಕ್ಷ ಬಸಪ್ಪ, ರೈತ ಮುಖಂಡರಾದ ಪ್ರಭುಸ್ವಾಮಿ, ರಾಜಪ್ಪ, ಸ್ವಾಮಿ, ನಂಜುಂಡಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಹಾದೇವಮ್ಮ, ರತ್ನಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT