ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟ: ನಾಲ್ಕು ಸಿಂಹದ ಮರಿಗಳ ಜನನ; ಹುಲಿಯ ಮರಣ

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚೆಗಷ್ಟೇ ನಾಲ್ಕು ಹುಲಿ ಮರಿಗಳ ಜನನದಿಂದ ಸುದ್ದಿಯಲ್ಲಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲೆಗ ಮತ್ತೆ ಸಿಂಹವೊಂದಕ್ಕೆ ಪುತ್ರೋತ್ಸವದ ಸಂಭ್ರಮ. ಜೊತೆಗೆ ಹುಲಿಯೊಂದರ ಸಾವಿನೊಂದಿಗೆ ಕೊಂಚ ಸೂತಕದ ಛಾಯೆ.

18 ವರ್ಷದ ರೂಪಾ ಎಂಬ ಸಿಂಹ ನಾಲ್ಕು ಮರಿಗಳಿಗೆ ಶನಿವಾರ ಬೆಳಿಗ್ಗೆ ಜನ್ಮ ನೀಡಿದೆ. ತಾಯಿ ಮತ್ತು ಹುಲಿ ಸಿಂಹಗಳು ಆರೋಗ್ಯವಾಗಿವೆ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ರಾಜು `ಪ್ರಜಾವಾಣಿ~ಗೆ ತಿಳಿಸಿದರು. ಆ.27ರಂದು ಹುಲಿಯೊಂದು ನಾಲ್ಕು ಮರಿಗಳಿಗೆ ಇದೇ ಜೈವಿಕ ಉದ್ಯಾನದಲ್ಲಿ ಜನ್ಮ ನೀಡಿತ್ತು. ಅದರ ಹೆಸರೂ ರೂಪಾ ಎಂಬುದು ಕಾಕತಾಳೀಯ.

ಹುಲಿಯ ಸಾವು: ಇದೇ ಜೈವಿಕ ಉದ್ಯಾನದಲ್ಲಿ ಕಳೆದ ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅನು ಎಂಬ 16 ವರ್ಷದ ಹೆಣ್ಣು ಹುಲಿಯು ಭಾನುವಾರ ಬೆಳಗಿನ ಜಾವ ಸಾವನ್ನಪ್ಪಿದೆ. ಈ ಹುಲಿಯು ಮೂಳೆ ಕ್ಯಾನ್ಸರ್‌ನಿಂದ ಮೃತಪಟ್ಟಿದೆ ಎಂಬ ಸಂಗತಿ ಮರಣೋತ್ತರ ಪರೀಕ್ಷೆಯ ನಂತರ ತಿಳಿದು ಬಂದಿದೆ. ಅನು ಮೊದಲಿನಿಂದಲೂ ಇದೇ ಉದ್ಯಾನವನದಲ್ಲಿ ವಾಸವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT