ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟ: ಪ್ರವೇಶ ದರ ಏರಿಕೆ

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಆನೇಕಲ್:  ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರವೇಶ ದರವನ್ನು ಫೆಬ್ರುವರಿ 1ರಿಂದ ಏರಿಸಲಾಗುತ್ತಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ರಾಜು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉದ್ಯಾನದ ಪ್ರವೇಶ ದರದಲ್ಲಿ ಏರಿಕೆಯಾಗಿದ್ದು, ಮೃಗಾಲಯದ ವೀಕ್ಷಣೆಗೆ ವಯಸ್ಕರಿಗೆ 60 ರೂಪಾಯಿ (ಹಿಂದಿನ ದರ 45ರೂ), 6ರಿಂದ 12 ವಯಸ್ಸಿನ ಮಕ್ಕಳಿಗೆ 30 ರೂಪಾಯಿ (ಹಿಂದಿನ ದರ 25ರೂ), ಹಿರಿಯ ನಾಗರಿಕರಿಗೆ 40 ರೂಪಾಯಿ(ಹಿಂದಿನ ದರ 30 ರೂ) ನಿಗದಿ ಪಡಿಸಲಾಗಿದೆ.
 
ಹುಲಿ, ಸಿಂಹ, ಕರಡಿ ಹಾಗೂ ಸಸ್ಯಹಾರಿ ಪ್ರಾಣಿಗಳ ಗ್ರ್ಯಾಂಡ್ ಸಫಾರಿ ವೀಕ್ಷಣೆಗೆ ವಯಸ್ಕರಿಗೆ 150 ರೂಪಾಯಿ (ಹಿಂದಿನ ದರ 115ರೂ), ಮಕ್ಕಳಿಗೆ 70 ರೂಪಾಯಿ(ಹಿಂದಿನ ದರ 60ರೂ) ಹಾಗೂ ಹಿರಿಯ ನಾಗರಿಕರಿಗೆ 100 ರೂಪಾಯಿಯನ್ನು (ಹಿಂದಿನ ದರ 70ರೂ) ನಿಗದಿಪಡಿಸಲಾಗಿದೆ.

ರಾಷ್ಟ್ರೀಯ ಉದ್ಯಾನವನ ಹಾಗೂ ವನ್ಯಧಾಮಗಳ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಡಿ.22ರಂದು ನಡೆದ ಮೃಗಾಲಯ ಪ್ರಾಧಿಕಾರದ 119ನೇ ಸಭೆಯಲ್ಲಿ ದರ ಏರಿಕೆಯ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT