ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಬಲಾದ: ಗಮನಸೆಳೆದ ದನಗಳ ಜಾತ್ರೆ

Last Updated 23 ಫೆಬ್ರುವರಿ 2012, 8:40 IST
ಅಕ್ಷರ ಗಾತ್ರ

ವಿಜಾಪುರ: ತಾಲ್ಲೂಕಿನ ಹೊಳೆ ಬಬಲಾದದಲ್ಲಿ ಬುಧವಾರದಂದು ನಡೆದ ಚಂದ್ರಗಿರಿದೇವಿ ಮಠದ ಜಾತ್ರೆ ನಿಮಿತ್ತ ನಡೆದ ಜಾನುವಾರುಗಳ ಜಾತ್ರೆಗೆ ರೈತರು ತಮ್ಮ ದನ-ಕರುಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ  ಆಗಮಿಸಿದ  ಗಮನ ಸೆಳೆದವು.

ಈ ಜಾತ್ರೆಗೆ ಪ್ರತಿ ವರ್ಷದಂತೆ ಈ ವರ್ಷವೂ ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಎರಡಲ್ಲಿ, ನಾಲ್ಕಲ್ಲಿ ಹೋರಿ ಕರುಗಳು, ಕಟ್ಟುಮಸ್ತಾಗಿ ಬೆಳೆಸಿದ ಸಾವಿರಾರು ಎತ್ತುಗಳು ಎತ್ತುಗಳು ಸುಮಾರು 100 ಎಕರೆಗಿಂತ ಹೆಚ್ಚು ಜಾಗದಲ್ಲಿ ಸೇರಿದ್ದರಿಂದ ದನಗಳ ಜಾತ್ರೆ ಗಿಜಿಗಿಡುತಿತ್ತು.

ಬರಗಾಲವಿದ್ದರೂ ರೈತರೂ ತಮ್ಮ ದೇವರು ಎಂದು ನಂಬಿರುವ ದನ-ಕರುಗಳು ಎತ್ತುಗಳನ್ನು ಚೆನ್ನಾಗಿ ಮೇಯಿಸಿ ಜಾತ್ರೆಗೆ ತಂದಿದ್ದರು. ಜಾತ್ರೆಯಲ್ಲಿ ಎತ್ತುಗಳನ್ನು ಕೊಳ್ಳುವವರು ಹಾಗೂ ಮಾರುವವರ ಸಂಖ್ಯೆ ಅಧಿಕವಾಗಿದ್ದು ಜಾತ್ರೆಗೆ ಮೆರುಗು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT