ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ನಿರ್ವಹಣೆಗೆ ಆದ್ಯತೆ: ಡಿಸಿ ಮೋಹನರಾಜ್

Last Updated 8 ಫೆಬ್ರುವರಿ 2012, 8:15 IST
ಅಕ್ಷರ ಗಾತ್ರ

ಹಾಸನ: `ಜಿಲ್ಲೆಯ ಆರು ತಾಲ್ಲೂಕು ಗಳಲ್ಲಿ ಬರದ ಸ್ಥಿತಿ ಎದುರಾಗಿದ್ದು,  ಬೇಸಿಗೆಯಲ್ಲಿ ಜನರಿಗೆ ಸಮಸ್ಯೆ ಯಾಗ ದಂತೆ ಪರಿಸ್ಥಿತಿಯನ್ನು ನಿಭಾ ಯಿಸು ವುದೇ ನನ್ನ ಮುಂದಿನ ಆದ್ಯತೆಯಾ ಗಿರುತ್ತದೆ~ ಎಂದು ಹೊಸ ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್ ತಿಳಿಸಿದರು.

ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದರು. `ಮುಂದಿನ ದಿನಗಳಲ್ಲಿ ಬರದ ತೀವ್ರತೆ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಜನರಿರೆ ಎಷ್ಟರ ಮಟ್ಟಿಗೆ ಸಹಕಾರ ನೀಡಬಹುದು ಎಂಬ ಬಗ್ಗೆ ಗಮನ ಹರಿಸಬೇಕು. ಬರ ಎದುರಿಸುವುದು ದೊಡ್ಡ ಸವಾಲು. ಅದಕ್ಕೆ ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದರು.

ನಬಾರ್ಡ್‌ನವರು 2011- 12ನೇ ಸಾಲಿ ನಲ್ಲಿ ಜಿಲ್ಲೆಯ ರೈತರಿಗೆ ರೂ. 1694 ಕೋಟಿ ಸಾಲ ನೀಡುವ ಗುರಿ ಇರಿಸಿ ಕೊಂಡಿದ್ದರು.   ಮಾರ್ಚ್ ಅಂತ್ಯದ ವೇಳೆಗೆ 1400 ಕೋಟಿ ರೂಪಾಯಿ ಗುರಿ ಸಾಧಿ ಸುವ ನಿರೀಕ್ಷೆ ಇದೆ. ಮುಂದಿನ ವರ್ಷಕ್ಕೆ 2118 ಕೋಟಿ ಗುರಿ ಇರಿಸಿಕೊಳ್ಳ ಲಾಗಿದ್ದು, ಈ ಗುರಿ ಸಾಧಿಸುವ ಮೂಲಕ ರೈತರಿಗೆ ನೆರವಾ ಗಲು ಕ್ರಮ ಕೈಗೊಳ್ಳಲಾಗುವುದು ಎಂದರು.

`ಬರಗಾಲದ ಕಾರಣದಿಂದಲೇ ಹೊಯ್ಸಳ ಉತ್ಸವವನ್ನು ರದ್ದು ಮಾಡಿ ಸರ್ಕಾರ ಆದೇಶ ನೀಡಿದೆ ಎಂದು ಕಚೇರಿಯ ಸಿಬ್ಬಂದಿ ಹೇಳಿ ದ್ದಾರೆ. ನಾನಿನ್ನೂ ಅದನ್ನು ನೋಡಿಲ್ಲ. ಹಲವು ವರ್ಷಗಳಿಂದ ಉತ್ಸವ ನಡೆದಿಲ್ಲ, ಹೊಯ್ಸ ಳೋತ್ಸವ ಆಚರಣೆ ಆಗ ಬೇಕು ಎಂಬುದು ಜನರ ಒತ್ತಾಸೆ ಎಂಬುದನ್ನೂ ಬಲ್ಲೆ. ಆ ಬಗ್ಗೆ ಸರ್ಕಾ ರದ ಜತೆಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

`ಕಾಡಾನೆ ಚಿರತೆ ಹಾವಳಿಗೆ ವೈಜ್ಞಾನಿಕ ವಾದಂಥ ಪರಿಹಾರ ಕಂಡು ಕೊಳ್ಳಬೇಕಾಗಿದೆ. ಜಿಲ್ಲೆಯಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ನಡೆಯುತ್ತಿದೆ. ಕೆಲವೇ ಗಂಟೆಗಳ ಹಿಂದೆ ಅರಣ್ಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ. ಮಾನವ- ಪ್ರಾಣಿ ಸಂಘರ್ಷದ ಬಗ್ಗೆ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ತಿಳಿಸಿದ್ದೇನೆ. ಅದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೋಹನರಾಜ್ ತಿಳಿಸಿದರು.

`ಜಿಲ್ಲೆಯಲ್ಲಿ ಇನ್ನೂ ಪ್ರವಾಸ ಮಾಡಿಲ್ಲ.  ಎಲ್ಲ ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿದ ಬಳಿಕ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ನಿರ್ಧಾರ ಗಳನ್ನು ಕೈಗೊಳ್ಳಬಹುದಾಗಿದೆ. ಹಿಂದಿನ ವರು ಜಾರಿಗೊಳಿಸಲು ಉದ್ದೇಶಿಸಿದ್ದ ಜನೋಪಯೋಗಿರುವಂಥ ಯಾವುದೇ ಯೋಜನೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂದರು.

ರಾಜಕೀಯ ಒತ್ತಡಗಳ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ಜಿಲ್ಲಾಧಿಕಾರಿಯಾಗಿ ದುಡಿ ಯಲು ಒಂದು ಅವಕಾಶ ಲಭಿಸಿದೆ. ರಾಜಕೀಯದ ಬಗ್ಗೆ ಚಿಂತಿಸದೆ ಕೆಲಸ ಮಾಡುತ್ತ ಹೋಗುತ್ತೇನೆ~ ಎಂದರು.

ಮೂಲತಃ ತಮಿಳುನಾಡಿನವರಾದ ಮೋಹನ ರಾಜ್, ಆರಂಭದ ಕೆಲವು ವರ್ಷಗಳಲ್ಲಿ ಎಲ್‌ಐಸಿಯಲ್ಲಿ ಉದ್ಯೋ ಗಿಯಾಗಿದ್ದರು. ಅಲ್ಲಿದ್ದುಕೊಂಡೇ 2007ರ ಬ್ಯಾಚ್‌ನಲ್ಲಿ ಐಎಎಸ್ ತೇರ್ಗಡೆಯಾಗಿ ಬೆಳಗಾವಿಯಲ್ಲಿ ತರಬೇತಿ ಪಡೆದರು.

ಬಳಿಕ ಹಾವೇರಿ ಜಿಲ್ಲೆಯ ಸವಣೂರು ಉಪವಿಭಾಗಾ ಧಿಕಾರಿಯಾಗಿ 20 ತಿಂಗಳ ಕಾಲ ಸೇವೆ ಸಲ್ಲಿಸಿದರು. ಅದಾದ ಬಳಿಕ ಡಿಪಿಆರ್ ಸೇವಾ ವಿಭಾಗದಲ್ಲಿ ಉಪ ಕಾರ್ಯದರ್ಶಿಯಾಗಿದ್ದ ಅವರು ಇದೇ ಮೊದಲಬಾರಿ ಜಿಲ್ಲಾಧಿಕಾರಿ ಹುದ್ದೆಯನ್ನು ಸ್ವೀಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT