ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲ ಕಾಮಗಾರಿ ಸಮರ್ಪಕ ನಿರ್ವಹಣೆಗೆ ಸೂಚನೆ

Last Updated 7 ಆಗಸ್ಟ್ 2012, 9:10 IST
ಅಕ್ಷರ ಗಾತ್ರ

ಹಾನಗಲ್: ಹಾನಗಲ್ ತಾಲ್ಲೂಕಿನ ಸುಮಾರು 12 ಗ್ರಾಮಗಳಲ್ಲಿ ಪ್ರಾಣಿ ಗಳಿಂದ ಮನುಷ್ಯನಿಗೆ ಬರುವ ಪ್ರಾಣಿ ಜನ್ಯ ರೋಗವಾದ `ಬ್ರುಸಲೋಸಿಸ್~ ಎಂಬ ಕಾಯಿಲೆ ಲಕ್ಷಣಗಳು ಕಂಡು ಬಂದಿದ್ದು, ರೋಗ ನಿಯಂತ್ರಿಸಲು ಪಶುವೈದ್ಯ ಇಲಾಖೆ ಕ್ರಮ ಕೈಗೊಂಡಿದೆ ಎಂದು ಪಶುಪಾಲನಾ ಇಲಾಖೆ ಸಹಾಯಕ ನಿರ್ದೆಶಕ ಡಾ.ಎನ್.ಎಫ್.ಕಮ್ಮಾರ ಹೇಳಿದರು.

ಸೋಮವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ನಡೆದ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆಯ ವರದಿ ನೀಡುವ ಸಂದರ್ಭದಲ್ಲಿ ಸಭೆಗೆ ವಿಷಯ ತಿಳಿಸಿದ ಅವರು, ಜಾನುವಾರುಗಳ ಜೊತೆಯಲ್ಲಿ ಚಟುವಟಿಕೆ ನಡೆಸುವ ವ್ಯಕ್ತಿಗೆ ಈ ರೋಗ ಬರುವ ಸಾಧ್ಯತೆಗಳಿವೆ. ಜ್ವರದಿಂದ ಬಳಲುವುದು ಕಾಯಿಲೆಯ ಲಕ್ಷಣವಾಗಿದ್ದು, ಹಳ್ಳಿಗಳಲ್ಲಿ ರೋಗದ ಮುಂಜಾಗ್ರತೆ ಬಗ್ಗೆ ತಿಳಿವಳಿಕೆ ನೀಡುವ ಮತ್ತು ರೋಗದ ಲಕ್ಷಣ ಕಂಡು ಬಂದವರಿಗೆ ಚುಚ್ಚುಮದ್ದು ನೀಡುವ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.

ಬರಗಾಲದ ಕಾಮಗಾರಿಯ ಅಡಿ ಯಲ್ಲಿ ಹೊಸದಾಗಿ ತೋಡಲಾದ ಕೊಳವೆ ಬಾವಿಗಳಿಗೆ ಶೀಘ್ರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಹಲವು ಗ್ರಾಮ ಸಭೆಗಳಲ್ಲಿ ವಿದ್ಯುತ್ ಸಂಪರ್ಕದ ವಿಳಂಬಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮನೋ ಜಕುಮಾರ ಗಡಬಳ್ಳಿ ಕೆ.ಪಿ.ಟಿ.ಸಿ.ಎಲ್ ಎಂಜನಿಯರ್ ಕೃಷ್ಣಪ್ಪ ಅವರಿಗೆ ಆಗ್ರಹಿಸಿದರು.

ಕೆಲವೊಂದು ಗ್ರಾಪಂ ವ್ಯಾಪ್ತಿಯಲ್ಲಿ ಅಂತರಜಾಲದ ಸಮಸ್ಯೆ ಮತ್ತು ಸಿಬ್ಬಂದಿಗಳಿಗೆ ಪೋಟೊ ತೆಗೆಯಲು ಹೆಚ್ಚಿನ ಅರಿವಿಲ್ಲದ ಕಾರಣ ಪಡಿತರ ಚೀಟಿಯ ವಿತರಣೆಯ ವ್ಯವಸ್ಥೆಯ ಕಾರ್ಯ ಚುರುಕುಗೊಂಡಿಲ್ಲ ಎಂದು ಆಹಾರ ಇಲಾಖೆಯ ಅಧಿಕಾರಿ ಛತ್ರದ ಸಭೆಗೆ ತಿಳಿಸಿದರು. 

ಹಾನಗಲ್ ವಿರಕ್ತಮಠದ ಎದುರಿ ನಲ್ಲಿ ಅತ್ಯಾಕರ್ಷಕ ವಿನ್ಯಾಸದೊಂದಿಗೆ ನಿರ್ಮಾಣವಾದ ರಂಗ ಮಂದಿರ ಸೇರಿ ದಂತೆ ತಾಲ್ಲೂಕಿನ ಮೂರು ಭಾಗಗಳಲ್ಲಿ ನಿರ್ಮಾಣಗೊಂಡಿರುವ ಕಾಲೇಜ್ ಕಟ್ಟಡಗಳ ಉದ್ಘಾಟನೆ ಸದ್ಯದಲ್ಲಿ ನಡೆ ಯಲಿದೆ ಎಂದು ಲೋಕೋಪಯೋಗಿ ಎಂಜನಿಯರ್ ಬಿ.ವೈ.ಬಂಡಿವಡ್ಡರ ಹೇಳಿದರು.

ಶಿಕ್ಷಣ ಇಲಾಖೆ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಪಿ.ಮೂಲಿ ಮನಿ, ಸುವರ್ಣ ಆರೋಗ್ಯ ಚೇತನ ಯೋಜನೆಯ ಅಂಗವಾಗಿ 1 ನೇ ವರ್ಗ ದಿಂದ 10 ನೇ ತರಗತಿಯ ವಿದ್ಯಾರ್ಥಿ ಗಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. `ಜಿಲ್ಲಾ ಕೃಷಿ ದರ್ಶನ~ ಮೂಲಕ 8 ನೇ ತರಗತಿಯ 150 ಮಕ್ಕಳಿಗೆ ಸಾವಯವ ಕೃಷಿ ಕೇಂದ್ರ, ಅರಣ್ಯ ಪಾಲನಾ ಕೇಂದ್ರಕ್ಕೆ ಪ್ರವಾಸ ಏರ್ಪಡಿಸಲಾಗಿದೆ.

ತಾಲ್ಲೂಕಿ ನಲ್ಲಿ ಒಟ್ಟು 145 ಶಿಕ್ಷಕರ ಕೊರತೆ ಯಿದ್ದು, ಗೌರವ ಸಂಭಾವನೆ ಮೂಲಕ ಸ್ಥಳಿಯರನ್ನು ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳುವ ಚಿಂತನೆಯಿದೆ ಎಂದರು. ತಾಲ್ಲೂಕಿನಲ್ಲಿ 33 ಹೊಸ ಅಂಗನವಾಡಿ ಕೇಂದ್ರಗಳನ್ನು ಆರಂಭಿಸ ಲಾಗುತ್ತಿದೆ ಎಂದು ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಅಧಿಕಾರಿ ಬಿ.ಆರ್.ಶೆಟ್ಟರ ಸಭೆಗೆ ತಿಳಿಸಿ ದರು. ಮಳೆಯ ಅಭಾವದ ಕಾರಣ ಕೆರೆ ಗಳಲ್ಲಿ ಮೀನು ಬಿತ್ತನೆ ಸ್ಥಗಿತಗೊಳಿಸ ಲಾಗಿದೆ ಎಂದು ಮೀನುಗಾರಿಕೆ ಇಲಾ ಖೆಯ ಅಧಿಕಾರಿ ಸ್ಪಷ್ಟಪಡಿಸಿದರು.

ವೈದ್ಯಾಧಿಕಾರಿಗಳ ಮುಷ್ಕರದ ಕಾರಣ ತಾಲ್ಲೂಕ ವೈದ್ಯಾಧಿಕಾರಿ ಸಭೆಗೆ ಗೈರು ಹಾಜರಾಗಿದ್ದರು. ಸಾಮಾಜಿಕ ಕಳಕಳಿ ಮರೆತ ವೈದ್ಯಾಧಿಕಾರಿಗಳ ಪ್ರತಿಭಟನೆ ಕ್ರಮ ಖಂಡನೀಯ ಎಂದು ಸಭೆ ನಿರ್ಣಯಿಸಿತು. ಜಿ.ಪಂ ಸದಸ್ಯ ಪದ್ಮ ನಾಭ ಕುಂದಾಪೂರ, ತಾ.ಪಂ ಅಧ್ಯಕ್ಷೆ ಲಲಿತವ್ವ ಹಿರೇಮಠ, ಉಪಾ ಧ್ಯಕ್ಷ ನಿಂಗಪ್ಪ ಗೊಬ್ಬೇರ, ಅಧಿಕಾರಿ ಮನೋಜ ಕುಮಾರ ಗಡಬಳ್ಳಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT