ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿಪ ಭಾಗವತರಿಗೆ ಸನ್ಮಾನ

Last Updated 21 ಜನವರಿ 2011, 14:35 IST
ಅಕ್ಷರ ಗಾತ್ರ

ಯಕ್ಷಗಾನ ಕಲಾಭಿಮಾನಿಗಳು: ಭಾನುವಾರ ರಾಜ್ಯಪ್ರಶಸ್ತಿ ಪುರಸ್ಕೃತ ಬಲಿಪ ನಾರಾಯಣ ಭಾಗವತರಿಗೆ ಸನ್ಮಾನ ಮತ್ತು ‘ತಾಮ್ರಧ್ವಜ ಕಾಳಗ’ ಯಕ್ಷಗಾನ ತಾಳಮದ್ದಳೆ (ಹಿಮ್ಮೇಳದಲ್ಲಿ ಭಾಗವತಿಕೆ: ಬಲಿಪ ನಾರಾಯಣ ಭಾಗವತರು. ಮದ್ದಳೆ: ಲಕ್ಷ್ಮೀಶ ಅಮ್ಮಣ್ಣಾಯ. ಚಂಡೆ: ರವಿಶಂಕರ ಬಡೆಕ್ಕಿಲ. ಅರ್ಥಧಾರಿಗಳು: ಜಬ್ಬಾರ್ ಸಮೊ, ರಾಧಾಕೃಷ್ಣ ಕಲ್ಚಾರ್, ಗಣರಾಜ ಕುಂಬಳೆ, ಸುಧನ್ವ ದೆರಾಜೆ) 
ತೆಂಕು ತಿಟ್ಟು ಯಕ್ಷಗಾನದ ಭಾಗವತಿಕೆಯಲ್ಲಿ ಬಲಿಪ ನಾರಾಯಣ ಭಾಗವತರದು ಬಹುದೊಡ್ಡ ಹೆಸರು. ಯಕ್ಷರಂಗದ ಭೀಷ್ಮಎಂದೇ ಖ್ಯಾತಿ. ಸುಮಾರು 50 ವರ್ಷಗಳ ಸುದೀರ್ಘ ಕಾಲದ ಭಾಗವತಿಕೆ. ಯಕ್ಷಗಾನದ ಪೂರ್ವರಂಗ ಸಂಗೀತವನ್ನು ನಿಖರವಾಗಿ ಬಲ್ಲ ಏಕೈಕ ಭಾಗವತ ಎಂಬ ಹೆಗ್ಗಳಿಕೆ.  ದಕ್ಷಿಣ ಕನ್ನಡದ ಮೂಡಬಿದ್ರೆ ಸಮೀಪ ನೂಯಿ ಎಂಬ ಪುಟ್ಟ ಹಳ್ಳಿಯಲ್ಲಿ ವಾಸ. ಕಟೀಲು ಮೇಳದಲ್ಲಿ ಹಲವಾರು ವರ್ಷ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. ಸ್ವತಃ ಪ್ರಸಂಗಕರ್ತರೂ ಹೌದು.  ಯಕ್ಷಗಾನ ಹಾಡುಗಳ ಅನೇಕ ಕೃತಿಗಳನ್ನೂ ರಚಿಸಿದ್ದಾರೆ. ಇವರು ರಚಿಸಿದ ಐದು ದಿನಗಳ ‘ದೇವಿ ಮಹಾತ್ಮೆ’ ಪ್ರಸಂಗದ ಹಾಡು, ಅತ್ಯಂತ ಮೌಲಿಕ ಮತ್ತು ಅಪರೂಪದ ಕೃತಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿದ್ದಾರೆ.

ಸ್ಥಳ: ಹತ್ವಾರ್ ಸಭಾಂಗಣ, ಸರ್ವೋದಯ ಕಾಲೇಜು, ಭಾರತೀಯ  ಸಂಸ್ಕೃತಿ ವಿದ್ಯಾಪೀಠ, 4ನೇ  ಮೇನ್ ಚಾಮರಾಜಪೇಟೆ. ಮಧ್ಯಾಹ್ನ 2

ಮಾಹಿತಿಗೆ : 488 19206.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT