ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲೆ ಬೀಸುವ ಬ್ಯಾಂಕ್ ಸ್ಥಿರ ಠೇವಣಿ

Last Updated 18 ಜನವರಿ 2011, 9:55 IST
ಅಕ್ಷರ ಗಾತ್ರ

ಗಾತ್ರ ಹಾಗೂ ಜನಸಂಖ್ಯೆಯ ಆಧಾರದ ಮೇಲೆ ಪ್ರಪಂಚದ ಬಹುದೊಡ್ಡ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಇಲ್ಲಿ ಶೇ 66ರಷ್ಟು ಕುಟುಂಬಗಳು ಕೃಷಿ ಹಾಗೂ ವ್ಯವಸಾಯದಿಂದಲೇ ಜೀವಿಸುತ್ತಾರೆ. ಯಾವುದೇ ಒಂದು ರಾಷ್ಟ್ರ ಸದೃಢವಾಗಿ ಮುಂದುವರಿಯಬೇಕಾದರೆ ಮುಖ್ಯವಾಗಿ ದೇಶದ ಆಂತರಿಕ ಆರ್ಥಿಕ ವ್ಯವಸ್ಥೆ ಸುಭದ್ರವಾಗಿರಬೇಕು. ಜತೆಗೆ ವಾಣಿಜ್ಯ, ಕೃಷಿ, ಹಾಗೂ ವಿಜ್ಞಾನ ಇವುಗಳಲ್ಲಿ ಅಪ್ರತಿಮ ಸಾಧನೆಗಳನ್ನು ಕೂಡಾ ಮಾಡಬೇಕಾಗುತ್ತದೆ. ಬಹು ಹೆಮ್ಮೆಯ ವಿಚಾರವೆಂದರೆ, ಇಂದು ಪ್ರಪಂಚದ ಬಹುಪಾಲು ರಾಷ್ಟ್ರಗಳು ಆರ್ಥಿಕ ಹಿಂಜರಿತದಿಂದ ಬಳಲುತ್ತಿದ್ದರೂ, ಭಾರತ ತನ್ನದೇ ಆದ ಸ್ಥಾನಮಾನ ಹಾಗೂ ಅಸ್ತಿತ್ವ ಕಾಪಾಡಿಕೊಂಡು ಬಂದಿದೆ.

ಸಾಮಾನ್ಯವಾಗಿ ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲಿಯೂ ವ್ಯವಸ್ಥಿತ ಹಣಕಾಸು ಮಾರುಕಟ್ಟೆ (organied money market) ಹಾಗೂ ಅವ್ಯವಸ್ಥಿತ ಹಣಕಾಸು ಮಾರುಕಟ್ಟೆಗಳಿದ್ದು ಭಾರತ ಕೂಡಾ ಈ ವ್ಯವಸ್ಥೆಯಿಂದ ಹೊರತಾಗಿಲ್ಲ.

ದೇಶದ ಪ್ರತಿಯೊಬ್ಬ ಪ್ರಜೆ ಸುಖ ಸಂತೋಷದಿಂದ ಬಾಳಲು ಅವರವರ ಜೀವನದಲ್ಲಿ ಆರ್ಥಿಕ ಶಿಸ್ತು ಹಾಸುಹೊಕ್ಕಾಗಿರಬೇಕು. ಆರ್ಥಿಕ ಶಿಸ್ತು ಪರಿಪಾಲಿಸಲು ವ್ಯಕ್ತಿಯು ಜೀವನದ ಪ್ರಾರಂಭದಿಂದಲೇ ಸರಿಯಾದ ಯೋಜನೆ ಮಾಡಿಕೊಳ್ಳಬೇಕು. ಜತೆಗೆ ಯೋಜಿತ ರೀತಿಯಲ್ಲಿ ನಡೆದುಕೊಳ್ಳಬೇಕು. ಸರ್ವೇಸಾಮಾನ್ಯವಾಗಿ ಆರ್ಥಿಕ ಶಿಸ್ತು ಪರಿಪಾಲಿಸುವಾಗ ಜನಸಾಮಾನ್ಯರು ‘ಉಳಿತಾಯ’ದ ಕಡೆ ಗುರಿ ಅಥವಾ ಗಮನಹರಿಸಬೇಕಾಗುತ್ತದೆ.

ಉಳಿತಾಯ ಎಂದಾಕ್ಷಣ ಕಣ್ಣೆದುರು ತಟ್ಟನೆ ನೆನಪಾಗುವುದು   ಬ್ಯಾಂಕುಗಳು. ಇತ್ತೀಚಿನ ದಿನಗಳಲ್ಲಿ ‘ಬ್ಯಾಂಕ್ ಠೇವಣಿ ಬಡ್ಡಿ ದರ’ಗಳಲ್ಲಿ ಬಹಳಷ್ಟು ಏರುಪೇರು ಕಂಡುಬರುತ್ತಿದ್ದು, ಜನಸಾಮಾನ್ಯರಲ್ಲಿ ಗೊಂದಲ  ಉಂಟುಮಾಡಿದೆ. ಹೀಗೆ ಬಡ್ಡಿ ದರದಲ್ಲಿ ಬದಲಾವಣೆಯಾಗುವುದಕ್ಕೆ ಕಾರಣವೇನು? ಹಾಗೂ ಇವುಗಳ ಹಿನ್ನೆಲೆ ಏನು? ಮತ್ತು ಪರಿಹಾರವೇನು ಎನ್ನುವುದನ್ನು ತಿಳಿದುಕೊಂಡಲ್ಲಿ, ಸಮಯೋಚಿತ ಲಾಭವನ್ನೂ ಪಡೆಯಬಹುದಾಗಿದೆ.

ದೇಶದ ಸಮಗ್ರ ಅಭಿವೃದ್ಧಿಗೆ (ಜಿ.ಡಿ.ಪಿ.). ಕೃಷಿ ಕೈಗಾರಿಕೆ ಹಾಗೂ ಇತರ ಸೇವೆಗಳು ಕಾರಣವಾಗಿರುತ್ತವೆ. ಈ ವಲಯದಲ್ಲಿ ಹೆಚ್ಚಿನ ಸಾಧನೆ ಕಾಣಲು ಬ್ಯಾಂಕುಗಳು ದೊಡ್ಡ ಮಟ್ಟದಲ್ಲಿ ಸಾಲ ಹಾಗೂ ಮುಂಗಡಗಳನ್ನು ನೀಡಬೇಕಾಗುತ್ತದೆ. ಹೀಗೆ ಆದ್ಯತಾ ರಂಗಗಳಿಗೆ ಸಾಲ ಹಾಗೂ ಮುಂಗಡಗಳನ್ನು ಕೊಡುವಾಗ, ವಿಧಿಸುವ ಬಡ್ಡಿ ದರಗಳಲ್ಲಿ ಬಹಳಷ್ಟು ಕಡಿಮೆ ಅಥವಾ ವಿನಾಯ್ತಿ ಕೊಡಬೇಕಾಗುತ್ತದೆ. ಈ ಕಾರಣದಿಂದ ಬ್ಯಾಂಕ್ ಠೇವಣಿ ಮೇಲಿನ ಬಡ್ಡಿದರ ಕೂಡಾ ಕಡಿಮೆ ಮಾಡಬೇಕಾಗುತ್ತದೆ.

ದೇಶದ ಆಂತರಿಕ ಆರ್ಥಿಕ ವ್ಯವಸ್ಥೆಗಳಿಗೆ ಅನುಗುಣವಾಗಿ ಕೇಂದ್ರ ಸರಕಾರದ ವಿತ್ತ ಸಚಿವಾಲಯ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್, ಆದ್ಯತಾರಂಗಗಳಿಗೆ ನೀಡುವ ಸಾಲಗಳ ಬಡ್ಡಿ ದರಗಳಲ್ಲಿ ಆಗಾಗ ಮಾರ್ಪಾಡು ಮಾಡುತ್ತಿರುತ್ತವೆ.

ಇದರಿಂದಾಗಿ ಕೆಲವೊಮ್ಮೆ ಕಡಿಮೆ ಬಡ್ಡಿ ಹಾಗೂ ಕೆಲವೊಮ್ಮೆ ಹೆಚ್ಚಿನ ಬಡ್ಡಿ ದರಗಳಿಗೆ ಸಾಲ ನೀಡುವುದರಿಂದ ಠೇವಣಿ ಮೇಲಿನ ಬಡ್ಡಿದರ ಕೂಡಾ ಏರಿಳಿತ  ಕಾಣುತ್ತಿರುತ್ತದೆ.

ಹಣದ ಚಲಾವಣೆ  ಹಾಗೂ ಹಣದುಬ್ಬರಗಳೂ ಠೇವಣಿಗಳ ಮೇಲಿನ ಬಡ್ಡಿ ದರಗಳ ಮೇಲೆ ಪರಿಣಾಮ ಬೀರುತ್ತವೆ. ಹಣದುಬ್ಬರ ತಡೆಯಲು ಹಣದ ಚಲಾವಣೆ  ನಿಯಂತ್ರಿಸಬೇಕಾಗುತ್ತದೆ.

ಇಂತಹ ಸಂದರ್ಭಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕುಗಳು ಕೊಡುವ ಸಾಲ ಹಾಗೂ ಮುಂಗಡಗಳನ್ನು ನಿಯಂತ್ರಿಸಲು, ಬ್ಯಾಂಕುಗಳು ಹೊಂದಿರುವ ಠೇವಣಿ ಮತ್ತು ನಗದುಗಳ   ಕೆಲವೊಂದು ಶೇಕಡಾವಾರು ಹಣ ತನ್ನಲ್ಲಿ ಇರಿಸಲು ಆಜ್ಞಾಪಿಸುತ್ತದೆ. ಜತೆಗೆ ಆರ್.ಬಿ.ಐ. ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿಯನ್ನೂ ಹೆಚ್ಚಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಎಲ್ಲಾ ಬ್ಯಾಂಕುಗಳು, ಠೇವಣಿಯ ಮೇಲಿನ ಬಡ್ಡಿ ದರಗಳನ್ನು ಏರಿಸುತ್ತವೆ.

ರಾಜ್ಯದಲ್ಲಿನ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಈಗ ಠೇವಣಿ ಮೇಲೆ ನೀಡುತ್ತಿರುವ
ಬಡ್ಡಿದರಗಳನ್ನು ಗಮನಿಸಿದರೆ, ಬಡ್ದಿದರಗಳ ಪೈಪೋಟಿಯ ಸ್ವರೂಪ ಸ್ವಲ್ಪ ತಿಳಿದಂತಾಗುತ್ತದೆ.
ಬ್ಯಾಂಕ್‌ಗಳ ಪೈಪೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT