ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳೆ ಜೋಡಿಸಿ ಗೆದ್ದ ವನಿತೆಯರು

Last Updated 23 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅಂದು ಸಂಜೆ ಜಿಆರ್‌ಟಿಯ ಜಯನಗರ ಮಳಿಗೆಯಲ್ಲಿ ಸಂಭ್ರಮ ಎದ್ದುಕಾಣುತ್ತಿತ್ತು. ಶ್ರಾವಣದ ಆರಂಭದಿಂದ 36 ದಿನಗಳ ಕಾಲ ನಡೆಸಲಾದ ಬಳೆ ಮೇಳದಲ್ಲಿ ವಿಜೇತರಾದ 36 ಮಹಿಳೆಯರಿಗೆ ತಲಾ 6 ಗ್ರಾಮ್ ತೂಕದ ರೂ. 16,500 ಮೌಲ್ಯದ ಬಳೆಯೊಂದನ್ನು ನೀಡಲಾಯಿತು.

ಮೇಳದಲ್ಲಿ ಒಂದರ ಮೇಲೆ ಒಂದರಂತೆ ಆಯಾ ದಿನ ಒಂದು ನಿಮಿಷದಲ್ಲಿ ದಿನ ಅತಿ ಹೆಚ್ಚು ಎತ್ತರದವರೆಗೆ ಬಳೆ ಜೋಡಿಸಿದ ಮಹಿಳೆಯನ್ನು ವಿಜೇತೆಯೆಂದು ಆಯ್ಕೆ ಮಾಡಲಾಗುತ್ತಿತ್ತು.

ದಕ್ಷಿಣ ಭಾರತದಾದ್ಯಂತ ಇರುವ ಜಿಆರ್‌ಟಿ ಮಳಿಗೆಗಳಲ್ಲಿ ಈ ಯೋಜನೆ ಆರಂಭಿಸಲಾಗಿದ್ದರೂ, ಬೆಂಗಳೂರಿನ ಗ್ರಾಹಕರು ಅತಿ ಉತ್ಸಾಹದಿಂದ ಮೇಳದಲ್ಲಿ ಪಾಲ್ಗೊಂಡರು. ಬಳೆ ಮೇಳದ ಸಮಯದಲ್ಲಿ ದಿನವೂ ಹೊಸ ವಿನ್ಯಾಸದ ಬಳೆ ತರಿಸಲಾಗುತ್ತಿತ್ತು ಎಂದು ಮಳಿಗೆಯ ವ್ಯವಸ್ಥಾಪಕ ರಾಮಾನುಜಂ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವ್ಯವಸ್ಥಾಪಕ ಕಾರ್ತಿಕ್ ಮತ್ತು ಎಜಿಎಂ ಗೋವಿಂದ್‌ರಾಜ್, ಜನವರಿ ಹೊತ್ತಿಗೆ ಮಲ್ಲೇಶ್ವರದಲ್ಲಿ ಜಿಆರ್‌ಟಿಯ ಹೊಸ ಮಳಿಗೆ ಆರಂಭಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT