ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿಯಲ್ಲಿ ಬಂಜೆತನ ನಿರ್ವಹಣೆ ಕಾರ್ಯಾಗಾರ

Last Updated 12 ಜುಲೈ 2012, 8:05 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ಪೋಲಾ ಪ್ಯಾರಡೈಸ್ ಸಭಾಂಗಣದಲ್ಲಿ ಬಳ್ಳಾರಿ ಸ್ತ್ರೀರೋಗ ಸಂಘ ಹಾಗೂ ವಿಮ್ಸ ಸ್ತ್ರೀರೋಗ ವಿಭಾಗದಿಂದ ಒಂದು ದಿನದ ಬಂಜೆತನ ನಿರ್ವಹಣೆ ಕಾರ್ಯಾಗಾರ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಉಪನ್ಯಾಸ ನೀಡಿದ ಹೈದ್ರಾಬಾದ್‌ನ ಬಂಜೆತನ ಮತ್ತು ಪ್ರನಾಳ ಶಿಶು ತಜ್ಞ ಡಾ. ಮಮತಾ ದೀನ್ ದಯಾಳ್, ಬಂಜೆತನ ಪ್ರಮಾಣ ಇತ್ತೀಚೆಗೆ ಹೆಚ್ಚುತ್ತಿದೆ. ಬಂಜೆತನಕ್ಕೆ ಕೇವಲ ಮಹಿಳೆ ಮಾತ್ರ ಕಾರಣಳು ಎಂದು ಬಿಂಬಿಸಲಾಗುತ್ತಿದೆ. ಆದರೆ, ಇಬ್ಬರೂ ಕಾರಣರು ಎಂಬ ವೈಜ್ಞಾನಿಕ ಸತ್ಯವನ್ನು ಅರಿಯದೆ ಮಹಿಳೆಯನ್ನು ಕೀಳಾಗಿ ಕಾಣಲಾಗುತ್ತಿದೆ. ಇದರಿಂದ ಬಂಜೆತನ ಅನುಭವಿಸುವ ಮಹಿಳೆಯು ಸಮಾಜ ಮತ್ತು ಕುಟುಂಬದಿಂದ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದರು. 

 ವಿಮ್ಸ ವೈದ್ಯ  ಡಾ.ಬಿ.ದೇವಾನಂದ್ ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನ ಸ್ತ್ರೀರೋಗ ತಜ್ಞೆ ಡಾ.ಶಿಲ್ಪಾ ಜಿ.ಬಿ ಅವರು ಬಂಜೆತನದ ನಿರ್ವಹಣೆ ಯಲ್ಲಿ ಮಾಡಬೇಕಾದ ಪರೀಕ್ಷೆಗಳು ಮತ್ತು ಔಷಧಗಳು ಬಗ್ಗೆ ಉಪನ್ಯಾಸ ನೀಡಿದರು.

ವಿಮ್ಸನ ಮೂತ್ರರೋಗ ತಜ್ಞ ಡಾ.ಇಮ್‌ದಾದ್ ಅಲಿ `ಬಂಜೆತನದಲ್ಲಿ ಪುರುಷನ ಪಾತ್ರ~ ಕುರಿತು ಉಪನ್ಯಾಸ ನೀಡಿದರು. ಶಿಶು ತಜ್ಞೆ ಡಾ.ಆರತಿ `ಬಂಜೆತನದ ನಿರ್ವಹಣೆಯಲ್ಲಿ ಅಲ್ಟ್ರಾಸೌಂಡ್‌ನ ಮಹತ್ವ ಮತ್ತು ವೀರ್ಯದಾನದ ಮಹತ್ವ ಹಾಗೂ ಕೃತಕ ಗರ್ಭಧಾರಣೆ ಮತ್ತು ಬೀಜೋತ್ಪಾದನೆಯಲ್ಲಿ ಔಷಧಿಗಳ ಪಾತ್ರ ಕುರಿತು ಮಾತನಾಡಿದರು.

ಡಾ.ಸುಮನ್ ಗಡ್ಡಿ `ಬಂಜೆತನ ಮತ್ತು ಜೀವನಶೈಲಿ~ ಕುರಿತು ಉಪನ್ಯಾಸ ನೀಡಿದರು. ಡಾ.ಶಿವಕುಮಾರ್, ವಿಮ್ಸ ಸ್ತ್ರೀರೋಗ ತಜ್ಞ ಡಾ.ಚಂದ್ರಶೇಖರ್, ಡಾ.ಆಶಾರಾಣಿ, ಡಾ.ಶೈಲಾ, ಡಾ. ರಾಧಿಕಾ ರಾವ್, ಡಾ.ಅನುಪಮಾ ಸುಂದರ್, ಡಾ.ಪುನೀತ್ ಅಜಯ್ ಸೇರಿದಂತೆ 75ಕ್ಕೂ ಹೆಚ್ಚು ಸ್ತ್ರೀರೋಗ ತಜ್ಞರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT