ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಜಯಂತಿ ಶತಮಾನೋತ್ಸವ: ಸಿದ್ಧತಾ ಸಭೆ 9 ರಂದು

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ದಾವಣಗೆರೆ: ಬಸವ ಜಯಂತಿ ಆಚರಣೆಗೆ ಈ ವರ್ಷ ಶತಮಾನೋತ್ಸವದ ಸಂಭ್ರಮ. ಅದಕ್ಕಾಗಿ ಫೆ. 9ರಂದು ಬೆಳಿಗ್ಗೆ 10ಕ್ಕೆ ನಗರದ ಶಿವಯೋಗಾಶ್ರಮದಲ್ಲಿ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ನಾಡಿನ ವಿವಿಧ ಮಠಾಧೀಶರು, ಸಾಹಿತಿಗಳು, ಸಂಶೋಧಕರು, ರಾಜಕೀಯ, ಸಾಮಾಜಿಕ ಮುಖಂಡರು, ಜನಪ್ರತಿನಿಧಿಗಳ ಹಾಗೂ ಬಸವಾಭಿಮಾನಿಗಳ ಸಭೆ ಕರೆಯಲಾಗಿದೆ.

ಹರ್ಡೇಕರ್ ಮಂಜಪ್ಪ, ಮುರುಘರಾಜೇಂದ್ರ ವಿರಕ್ತಮಠದ ಅಂದಿನ ಪೀಠಾಧಿಪತಿ ಮೃತ್ಯುಂಜಯ ಅಪ್ಪಗಳು ಸೇರಿದಂತೆ ಹಲವು ಗಣ್ಯರು ಸೇರಿ 1913ರಲ್ಲಿ ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ನಗರದಲ್ಲಿ ಬಸವ ಜಯಂತಿ ಆಚರಣೆಗೆ ಚಾಲನೆ ನೀಡಿದ್ದರು.

ಅಂದು ಆರಂಭವಾದ ಬಸವ ಜಯಂತಿ ನಂತರ ರಾಷ್ಟ್ರದ ಎಲ್ಲೆಡೆ ಜನರು ಆಚರಿಸಲು ಆರಂಭಿಸಿದರು. ಬಸವ ಜಯಂತಿ ಆಚರಣೆಗೆ ಈಗ ಶತಮಾನೋತ್ಸವ ಸಂಭ್ರಮ. ಅದಕ್ಕಾಗಿ ಪ್ರಸಕ್ತ ವರ್ಷದ ಏ. 24ರಿಂದ ಶತಮಾನೋತ್ಸವ ವರ್ಷ ಎಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಮುರುಘರಾಜೇಂದ್ರ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಾಮಾಜಿಕ ಚಳವಳಿಯ ಹರಿಕಾರ, ವಿಶ್ವಗುರುವಿನ ಜಯಂತಿಯ ಶತಮಾನೋತ್ಸವವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ರಾಷ್ಟ್ರಾದ್ಯಂತ ವರ್ಷಪೂರ್ತಿ ಆಚರಿಸಲು ನಿರ್ಧರಿಸಲಾಗಿದೆ. ಏ. 24ರಂದು ಆಚರಿಸುವ ಬಸವ ಜಯಂತಿಗೆ ನಾಡಿನ ಎಲ್ಲ ಮಠಾಧೀಶರನ್ನೂ ಆಹ್ವಾನಿಸುವ ಆಲೋಚನೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT