ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬಸವಣ್ಣ ಬದುಕಿದ್ದು 36 ಅಲ್ಲ 63 ವರ್ಷ'

Last Updated 3 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಮೈಸೂರು: ವಿಶ್ವಗುರು ಬಸವಣ್ಣನವರು 63 ವರ್ಷಗಳ ಕಾಲ ಬದುಕಿದ್ದರು. `ಕಾಲಜ್ಞಾನ ವಚನಗಳ' ಅಧ್ಯಯನದಿಂದ ಈ ವಿಷಯ ತಿಳಿದು ಬರುತ್ತದೆ ಎಂದು ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಪ್ರತಿಪಾದಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಸಾಹಿತಿಗಳು ಇಲ್ಲಿಯವರೆಗೆ ಬಸವಣ್ಣನವರ ಬದುಕಿದ್ದು 36 ವರ್ಷಗಳು ಎಂದು ಬರೆದುಕೊಂಡು ಬಂದಿರುವುದು ತಪ್ಪು ಎಂದು ಹೇಳಿದರು.

ಕ್ರಿ.ಶ. 1160ರಲ್ಲಿ ಕಲ್ಯಾಣವನ್ನು ಪ್ರವೇಶಿಸಿದ ಬಸವಣ್ಣನವರು ಕ್ರಿ.ಶ. 1196ರಲ್ಲಿ ಕಲ್ಯಾಣದಿಂದ ಕೂಡಲಸಂಗಮದತ್ತ ಬಂದರು. ಅವರು ಕಲ್ಯಾಣದಲ್ಲಿ ವಾಸವಿದ್ದುದು 36 ವರ್ಷ, ಬದುಕಿದ್ದು 63 ವರ್ಷ ಎಂದರು.

ಅವರು ಲಿಂಗೈಕ್ಯರಾಗಿ 818 ವರ್ಷಗಳು ಕಳೆದ ಸಂಸ್ಮರಣೆಯನ್ನು ಭಾನುವಾರ(ಆ.4) ಬೆಳಿಗ್ಗೆ 10.30ಕ್ಕೆ ಅಗ್ರಹಾರದಲ್ಲಿರುವ ಹೊಸಮಠದ ನಟರಾಜ ಕಲ್ಯಾಣಮಂಟಪದಲ್ಲಿ ನಡೆಸಲಾಗುವುದು. ಕಂದಾಯ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಸಂಸದ ಎಚ್. ವಿಶ್ವನಾಥ್, ಶಾಸಕ ಸಾ.ರಾ. ಮಹೇಶ್ ಆಗಮಿಸುವರು. ಕೆ.ಎಂ. ಶಿವಶಂಕರ್ ಅಧ್ಯಕ್ಷತೆ ವಹಿಸುವರು ಎಂದರು.

ಬಸವಣ್ಣನವರ 111 ಅಡಿ ಪುತ್ಥಳಿ: ಬೆಂಗಳೂರಿನ ವಿಶ್ವಕಲ್ಯಾಣ ಮಿಷನ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕುಂಬಳಗೋಡು ವ್ಯಾಪ್ತಿಯ ಬಸವ ಗಂಗೋತ್ರಿ ಎಂಬಲ್ಲಿ ರೂ. 5 ಕೋಟಿ ವೆಚ್ಚದಲ್ಲಿ 111 ಅಡಿ ಎತ್ತರದ ಬಸವ ಪುತ್ಥಳಿಯನ್ನು ನಿರ್ಮಾಣ ಮಾಡಲಾಗುವುದು. 30 ಅಡಿ ಎತ್ತರದ ಪೀಠದ ಮೇಲೆ ಇದು ಸ್ಥಾಪನೆಯಾಗಲಿದೆ. ಮೂರ್ತಿಯ ಸುತ್ತ ಶರಣೋದ್ಯಾನ ಇರಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT