ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಾಪಟ್ಟಣ: ಬಾಬಾ ಬುಡೇನ್‌ವಲಿ ಉರುಸ್‌ಗೆ ತೆರೆ

Last Updated 21 ಫೆಬ್ರುವರಿ 2011, 6:45 IST
ಅಕ್ಷರ ಗಾತ್ರ

ಬಸವಾಪಟ್ಟಣ: ಇಲ್ಲಿನ ಇತಿಹಾಸ ಪ್ರಸಿದ್ಧ ಮುಸ್ಲಿಂ ಸಂತ ಹಜರತ್ ದಾದಾ ಹಯಾತ್ ಖಲಂದರ್ ಬಾಬಾ ಬುಡೇನ್ ವಲಿ ಅವರ ಮೂರು ದಿನಗಳ ವಾರ್ಷಿಕ ಉರುಸ್ ಭಾನುವಾರ ಮುಕ್ತಾಯವಾಯಿತು.ವಲಿ ಅವರ ಉರುಸ್ ನಿಮಿತ್ತ ಶುಕ್ರವಾರ ರಾತ್ರಿ ನಡೆದ ಸಂದಲ್ ಉತ್ಸವದಲ್ಲಿ ನೂರಾರು ಜನ ಭಕ್ತರು ಮತ್ತು ಫಕೀರರು ಭಾಗವಹಿಸಿ ಸಂಪ್ರದಾಯದಂತೆ ಇಲ್ಲಿನ ಹಾಲಸ್ವಾಮಿಗಳ ಮೂಲ ಮಠದಿಂದ ಗಂಧವನ್ನು ಸ್ವೀಕರಿಸಿ ಬಾಬಾ ಬುಡೇನ್ ವಲ ಅವರ ಪವಿತ್ರ ಗದ್ದುಗೆಗೆ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.
ಶನಿವಾರ ನಡೆದ ವಲಿಯವರ ಉರುಸ್‌ನಲ್ಲಿ ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಸಹಸ್ರಾರು ಜನ ಹಿಂದೂ ಮುಸ್ಲಿಂ ಬಾಂಧವರು ವಲಿಯವರ ಗದ್ದುಗೆಗೆ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಅಂದು ರಾತ್ರಿ ಪ್ರಸಿದ್ಧ ಗಾಯಕರಿಂದ ಮೊಹಮದ್‌ಕೆ ಶಹರ್‌ಮೆ ಎಂಬ ಖವಾಲಿ ಗಾಯನವನ್ನು ಏರ್ಪಡಿಸಲಾಗಿತ್ತು. ಭಾನುವಾರ ಉರುಸ್ ನಿಮಿತ್ತ ವಿಶೇಷ ಪ್ರಾರ್ಥನೆಯೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು.

ಧರ್ಮದರ್ಶಿ ಹಾಜಿ ಗೌಸ್ ಪೀರಾನ್, ಮಕಾನ್‌ದಾರ್ ಎಂ. ಫಜಲುರ್ ರಹಮಾನ್ ಮತ್ತು ಸೋದರರು ಬಸವಾಪಟ್ಟಣದ ಸಮಸ್ತ ಹಿಂದೂ ಮುಸ್ಲಿಂ ಬಾಂಧವರು ಮತ್ತು ದಾವಣಗೆರೆ ಜಿಲ್ಲಾ ವಕ್ಫ್ ಮಂಡಲಿಯವರು ಉತ್ಸವದ ನೇತೃತ್ವ ವಹಿಸಿದ್ದರು.

ಸಂಘಟಿತರಾಗಲು ಕರೆ
ಶತ ಶತಮಾನಗಳಿಂದ ಬಡತನ, ಹಸಿವು, ಅಸ್ಪೃಶ್ಯತೆಯಂತಹ ನೋವುಗಳನ್ನು ಅನುಭವಿಸಿಕೊಂಡು ಬಂದಿರುವ ದಲಿತರು ಸಂಘಟಿತರಾಗಿ ತಮ್ಮ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನರಸಿಂಹಪ್ಪ ಕರೆ ನೀಡಿದರು. ಸಮೀಪದ ಮರಬನಹಳ್ಳಿಯಲ್ಲಿ ಈಚೆಗೆ ಡಿಎಸ್‌ಎಸ್ ಗ್ರಾಮ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

ದಲಿತ ವರ್ಗಕ್ಕೆ ಅನಕ್ಷರತೆ ಒಂದು ಶಾಪವಾಗಿ ಪರಿಣಮಿಸಿದೆ. ನಾವು ಸಾಕ್ಷರರಾಗದೇ ಅಭಿವೃದ್ಧಿ ಸಾಧ್ಯವಿಲ್ಲ. ಇದಕ್ಕಾಗಿ ಪ್ರತಿಯೊಬ್ಬ ದಲಿತನೂ ಎಷ್ಟೇ ಕಷ್ಟವಿದ್ದರೂ ತಮ್ಮ ಮಕ್ಕಳಿಗೆ ವಿದ್ಯೆ ಕಲಿಸಿ ಅವರನ್ನು ಸಮಾಜದ ಸಂಪನ್ಮೂಲ ವ್ಯಕ್ತಿಯನ್ನಾಗಿಸಲು ಕಂಕಣಬದ್ಧರಾಗಬೇಕೆಂದು ನರಸಿಂಹಪ್ಪ ನುಡಿದರು.

 ತಾಲ್ಲೂಕು ಮಾದಿಗ ದಂಡೋರ ಸಮಿತಿಯ ಅಧ್ಯಕ್ಷ ದೇವೇಂದ್ರಪ್ಪ ಮಾತನಾಡಿ, ಮಾದಿಗರಿಗೆ ಒಳ ಮೀಸಲಾತಿ ಇಲ್ಲದೇ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸಿದಾಗ ಮಾತ್ರ ದಲಿತರು ಮುಂದೆ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸಕ ಡಾ.ಎ.ಡಿ. ಬಸವರಾಜ ಮಾತನಾಡಿ, ಹಿಂದಿನ ಕಾಲದಲ್ಲಿ ದಲಿತರು ಅನುಭವಿಸಿದ ನೋವು ಸಂಕಟಗಳ ಫಲವಾಗಿ ಇಂದು ನಾವೆಲ್ಲರೂ ಕಾನೂನು ಪ್ರಕಾರ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಿದೆ. ಇಂದಿನ ದಲಿತರು ವಿದ್ಯಾವಂತರಾಗಿ ಸಾಮಾಜಿಕ, ಆರ್ಥಿಕ ಅನುಕೂಲತೆಗಳನ್ನು ಪಡೆಯಬೇಕು ಎಂದರು.ಡಿಎಸ್‌ಎಸ್ ಗ್ರಾಮ ಸಮಿತಿ ಅಧ್ಯಕ್ಷ ಎ.ಕೆ. ನಾಗರಾಜ, ಗ್ರಾ.ಪಂ. ಸದಸ್ಯ ಎ.ಕೆ. ಜಗದೀಶ, ಜಿ.ಎಂ. ಚನ್ನಪ್ಪ, ಪಿ. ನೀಲಕಂಠಪ್ಪ, ಎ.ಕೆ. ಹನುಮಂತಪ್ಪ, ಎ.ಕೆ. ಹಾಲೇಶ್, ಎ.ಕೆ. ಅಂಜನಪ್ಪ, ಎ.ಕೆ. ರವಿ, ಎ.ಕೆ. ಬಸವರಾಜಪ್ಪ ಮಾತನಾಡಿದರು. ಶೋಭಾ ಸ್ವಾಗತಿಸಿದರು. ಪ್ರಭುಕುಮಾರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT