ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆ ನಾಳೆ

Last Updated 4 ಅಕ್ಟೋಬರ್ 2011, 8:00 IST
ಅಕ್ಷರ ಗಾತ್ರ

ಮುಧೋಳ: ನಗರದ ಬಸ್ ನಿಲ್ದಾಣದ ಮುಂದೆ  ಜಗಜ್ಯೋತಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಇದೇ 5ರಂದು ನಡೆಯಲಿದೆ.ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಇಲ್ಲಿನ ಗವಿಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರಾಣಿ ಸಮೂಹ ಸಂಸ್ಥೆಗಳ ಕಾರ್ಯ ನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಮಾತನಾಡಿ, ಪ್ರತಿಷ್ಠಾಪನೆ ವಿಜೃಂಭಣೆಯಿಂದ ನಡೆಯಲಿದೆ ಎಂದರು.

ಸಮಾರಂಭದಲ್ಲಿ ಕೂಡಲಸಂಗಮದ ಪಂಚಮ ಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಜಮಖಂಡಿ ಓಲೇ ಮಠದ ಡಾ. ಚನ್ನಬಸವ ಸ್ವಾಮೀಜಿ, ಮುಧೋಳ ಗವಿಮಠ ವಿರಕ್ತಮಠದ ಮೃತ್ಯುಂಜಯ ಸ್ವಾಮೀಜಿ, ಕಸಬಾ ಜಂಬಗಿ ಹಿರೇ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಂಟೂರಿನ ಸಿದ್ಧಾರೂಢ ಬೃಹನ್ಮಠದ ಸದಾ ನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ಪುರಸಭೆ ಅಧ್ಯಕ್ಷ ರಾಜು ಪಾಲೋಜಿ, ಅಂದು ನಗ ರದ ಸ್ವಚ್ಛತೆ ಹಾಗೂ ಬೀದಿಗಳ ಶೃಂಗಾರದ ಜವಾಬ್ದಾ ರಿಯನ್ನು ಪುರಸಭೆ  ವಹಿಸಿಕೊಂಡಿದೆ ಎಂದರು. ಜಮಖಂಡಿ ರಸ್ತೆಯ ನಿರಾಣಿಯವರ ಮನೆಯಿಂದ ಬೆಳಿಗ್ಗೆ ಶೋಭಾ ಯಾತ್ರೆ ಹೊರಟು ನಗರದ ಸಂಗೊಳ್ಳಿ ರಾಯಣ್ಣ ವೃತ್ತ, ಉತ್ತರ ಗೇಟ್, ತಂಬಾಕ ಚೌಕ, ಗಾಂಧಿವೃತ್ತ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಹಾದು ಬಸವೇಶ್ವರ ವೃತ್ತಕ್ಕೆ ಆಗಮಿಸಲಿದೆ ಎಂದು ಅವರು ತಿಳಿಸಿದರು.

ರಾಚಪ್ಪ ಕರೇಹೊನ್ನ, ಎಸ್.ಆರ್.ಢಂಗಿ, ರಾಮನ ಗೌಡ ನಾಡಗೌಡ, ಶಂಕ್ರಪ್ಪ ಗೋಸಾರ, ಮಹದೇವಪ್ಪ ಹೊಸಕೋಟಿ, ಎಸ್.ಪಿ.ದಾನಪ್ಪಗೋಳ, ಗಿರೀಶ ಮೇತ್ರಿ, ಮಹಾಲಿಂಗ ಬಳಿಗಾರ, ಅನೀಲ ಪೂಜಾರಿ, ದಾನೇಶ ತಡಸಲೂರ, ಗಿರಿಮಲ್ಲಪ್ಪ ತೇಲಿ, ಗುರು ಪಾದಪ್ಪ ಯರಗಟ್ಟಿ, ದುಂಡಪ್ಪ ಯರಗಟ್ಟಿ, ಶಿವು ಸ್ವತಂತ್ರಮಠ, ಎಸ್.ಬಿ.ಅಕ್ಕಿಮರಡಿ, ಪ್ರಕಾಶ ವಸ್ತ್ರದ, ಕಲ್ಲಪ್ಪ ಸಬರದ, ಎಂ.ಎಸ್.ನಾಯಕವಾಡಿ, ಸತೀಶ ಬಂಡಿವಡ್ಡರ ಮುಂತಾದವರು ಉಪಸ್ಥಿತರಿದ್ದರು.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT