ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ಚಾಲಕನ ನೆರವಿಗೆ ಬಾರದ ವಕೀಲರು

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

ಪುಣೆ (ಐಎಎನ್‌ಎಸ್): ಜನನಿಬಿಡ ಸ್ವರ್ಗೇಟ್ ಪ್ರದೇಶದಲ್ಲಿ ಯದ್ವಾತದ್ವಾ ಬಸ್ ಚಲಾಯಿಸಿ 9 ಜನರ ಸಾವಿಗೆ ಮತ್ತು 27 ಮಂದಿ ಗಾಯಗೊಳ್ಳಲು ಕಾರಣನಾದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಸಂತೋಷ್ ಮಾನೆಯನ್ನು ನ್ಯಾಯಾಲಯ ಗುರುವಾರ ಫೆಬ್ರವರಿ 3ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ.

ಈ ನಡುವೆ, ನಗರದ ಜನತೆ ಬೆಚ್ಚಿಬೀಳುವಂತೆ ಮಾಡಿದ ಈ ಕೃತ್ಯದ ಆರೋಪಿ ಮಾನೆಯ ಪರವಾಗಿ ವಾದಿಸಬಾರದು ಎಂಬ ನಿರ್ಧಾರಕ್ಕೆ    ಪುಣೆಯ ವಕೀಲರು ಬಂದಿದ್ದಾರೆ.

 `ಘಟನೆ ವೇಳೆ ಮಾನೆ ಮಾನಸಿಕವಾಗಿ ಅಸ್ವಸ್ಥನಾಗಿದ್ದನೋ ಇಲ್ಲವೋ ಎಂಬುದು ಬೇರೆ ವಿಷಯ. ಆದರೆ ಆತನ ಕೃತ್ಯ ಒಪ್ಪಿಕೊಳ್ಳುವಂತಹದ್ದಲ್ಲ. ನೈತಿಕ ನೆಲೆಗಟ್ಟಿನಲ್ಲಿ ನಾವ್ಯಾರೂ ಆತನನ್ನು ಪ್ರತಿನಿಧಿಸದಿರುವ ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ~ ಎಂದು ವಕೀಲರ ಸಂಘ ಸುದ್ದಿಸಂಸ್ಥೆಗೆ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT