ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ಪ್ರಯಾಣ ದರ ಏರಿಕೆ 21ರಿಂದ

Last Updated 20 ಜನವರಿ 2011, 8:55 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಯಾಣ ದರ ಪರಿಷ್ಕರಿಸಲಾಗಿದ್ದು, ನೂತನ ದರ ಇದೇ 21ರಿಂದ ಜಾರಿಗೆ ಬರಲಿದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ತಿಳಿಸಿದೆ.

ಗ್ರಾಮಾಂತರ ಸಿಟಿ ಬಸ್ ಹಾಗೂ ನಗರ ಸಿಟಿ ಬಸ್ ಪ್ರಯಾಣ ದರದಲ್ಲಿ 50 ಪೈಸೆಯಷ್ಟು ಏರಿಕೆಯಾಗಿದ್ದು, ಎಕ್ಸ್‌ಪ್ರೆಸ್ ಹಾಗೂ ಷಟಲ್ ಬಸ್ ದರವನ್ನು ರೂ. 1 ಹೆಚ್ಚಿಸಲಾಗಿದೆ. ಸಿಟಿ ಬಸ್ ಪ್ರಯಾಣದ ಕನಿಷ್ಠ ದರದಲ್ಲಿ ಏರಿಕೆ ಆಗಿಲ್ಲ. 2.1 ಕಿ.ಮೀ.ನಿಂದ 4 ಕಿ.ಮೀ.ವರೆಗೆ ಇದ್ದ ರೂ.   4.5 ದರವನ್ನು 50 ಪೈಸೆ ಏರಿಕೆ ಮಾಡಿ ರೂ. 5ಕ್ಕೆ ಏರಿಸಲಾಗಿದೆ.ಹೊಸ ದರದಂತೆ ಎಕ್ಸ್‌ಪ್ರೆಸ್ ಹಾಗೂ ಷಟಲ್ ಬಸ್ ದರವನ್ನು ಪ್ರತಿ ಸ್ಟೇಜ್‌ಗೆ ರೂ.1ರಂತೆ ಹೆಚ್ಚಿಸಲಾಗಿದೆ. 6.50 ಕಿ.ಮೀ.ವರೆಗೆ ಇದ್ದ ರೂ. 4 ಪ್ರಯಾಣದರ ಈಗ ರೂ. 5ಗೆ ಹೆಚ್ಚಿಸಲಾಗಿದೆ.

ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳ ಕನಿಷ್ಟ ದರವೂ ರೂ. 4 ಇದ್ದು, 4.1 ಕಿ.ಮೀ.ಯಿಂದ ಹೆಚ್ಚಿನ ದೂರಕ್ಕೆ ಪ್ರಯಾಣಿಸುವ ದರವನ್ನು ರೂ.1ರಂತೆ ಹೆಚ್ಚಿಸಲಾಗಿದೆ. ಪರಿಷ್ಕೃತ ದರದಂತೆ ಇದುವರೆಗೆ ಇದ್ದ 5 ರೂ. ಬದಲಾಗಿ ರೂ.6 ಪಾವತಿಸಿ ಪ್ರಯಾಣಿಸಬೇಕಿದೆ. ಎಕ್ಸ್‌ಪ್ರೆಸ್ ಹಾಗೂ ಸರ್ವಿಸ್ ಬಸ್‌ಗಳ ಕನಿಷ್ಟ ಪ್ರಯಾಣ ದರವನ್ನು ರೂ.4ರಿಂದ 5ಕ್ಕೆ ಏರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT