ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ಸಂಚಾರ ಹೆಚ್ಚಿಸಿ

Last Updated 14 ಮೇ 2012, 19:30 IST
ಅಕ್ಷರ ಗಾತ್ರ

ವಿದ್ಯಾರಣ್ಯಪುರದಿಂದ ಜಾಲಹಳ್ಳಿ ವೃತ್ತದವರೆಗೆ ರೂಟ್ ನಂ. ಎಂಟು ಸಿ ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಸಂಚರಿಸುತ್ತದೆ. ಪ್ರತಿ ಅರ್ಧ ಗಂಟೆಗೊಂದರಂತೆ ದೊಡ್ಡಬೊಮ್ಮಸಂದ್ರ, ಬಿ.ಇ.ಎಲ್ ವೃತ್ತ, ಎಚ್.ಎಂ.ಟಿ. ಆಡಿಟೋರಿಯಂ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮಾರ್ಗ ಈ ಬಸ್ಸಿನದು. ಇದರಿಂದ ವಿದ್ಯಾರಣ್ಯಪುರದ ಜನರಿಗೆ ತುಂಬಾ ಅನುಕೂಲವಾಗಿದೆ.

ಆದರೆ ಕಚೇರಿ ಹಾಗೂ ಕಾಲೇಜಿಗೆ ಹೋಗುವವರಿಗೆ  ಐದು ಗಂಟೆಯ ನಂತರವೇ ಬಸ್ಸಿನ ಅನುಕೂಲದ ಅಗತ್ಯವಿದೆ.  ಆಗ ಎಂಟು ಸಿ ಬಸ್ ಸಂಚಾರ ಇರುವುದಿಲ್ಲ. ಇದರಿಂದಾಗಿ ಪ್ರತಿ ನಿತ್ಯ ಪ್ರಯಾಣಿಸುವ ಸರ್ಕಾರಿ ಉದ್ಯೋಗಿಗಳಿಗೆ, ಉದ್ಯೋಗಸ್ಥ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ.

ಆದರೆ, ಸಾಯಂಕಾಲ ಆರು ಗಂಟೆಯ ಮೇಲೆ ಬಿ.ಇ.ಎಲ್. ವೃತ್ತದಲ್ಲಿ ಸಾಕಷ್ಟು ಅಂದರೆ ಸುಮಾರು ಎರಡರಿಂದ ಮೂರು ಬಸ್ ಹಿಡಿಯುವಷ್ಟು ಜನ ಇರುತ್ತಾರೆ. ಮೆಜೆಸ್ಟಿಕ್‌ನಿಂದ ಹಾಗೂ ಯಲಹಂಕಕ್ಕೆ ಹೋಗುವ ಎಲ್ಲಾ ಬಸ್‌ಗಳೂ ತುಂಬಿರುತ್ತವೆ. 

ಆದ್ದರಿಂದ ತಾವು ನಮ್ಮ ಮನವಿಗೆ ಸ್ಪಂದಿಸಿ ರೂಟ್ ನಂ. ಎಂಟು ಸಿ ಬಸ್ಸನ್ನು ರಾತ್ರಿ ಒಂಬತ್ತು ಗಂಟೆಯವರೆಗೆ ವಿಸ್ತರಿಸಿದರೆ ವಿದ್ಯಾರಣ್ಯಪುರದ ಸಮಸ್ತ ಜನರಿಗೆ ಪ್ರಯೋಜನವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT