ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಘಟಕಗಳಲ್ಲಿಯೇ ಡೀಸೆಲ್‌ ಬಂಕ್‌

Last Updated 11 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಜ್ಯ ರಸ್ತೆ ಸಾರಿಗೆ ನಿಗಮದ ವಿವಿಧ ಬಸ್‌ ಘಟಕಗಳಲ್ಲಿ (ಡಿಪೋ) ಡೀಸೆಲ್‌ ಮಾರಾಟಕ್ಕೆ ಹೊಸ ದಾಗಿ ಬಂಕ್‌ ಸ್ಥಾಪಿಸಲು ಭಾರತೀಯ ತೈಲ ನಿಗಮ (ಐಒಸಿ)ಪ್ರಸ್ತಾವ ಸಲ್ಲಿಸಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ ಇಲ್ಲಿ ಹೇಳಿದರು.

'ಪದೇಪದೇ ಡೀಸೆಲ್‌ ಬೆಲೆ ಹೆಚ್ಚಾಗುತ್ತಿದ್ದು ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಖಾಸಗಿ ಬಂಕ್‌ಗಳಲ್ಲಿಯೇ ಸಾರಿಗೆ ಸಂಸ್ಥೆಗಳ ಎಲ್ಲ ಬಸ್‌ಗಳಿಗೆ ಡೀಸೆಲ್‌ ತುಂಬಿಸಿ ಕೊಳ್ಳಲಾಗುತ್ತಿದೆ. ಖಾಸಗಿ ಬಂಕ್‌ಗಲ್ಲಿ ಮಾರಾಟವಾಗುವ ದರದಲ್ಲಿಯೇ ಸಂಸ್ಥೆಯ ವಾಹನಗಳಿಗೆ ಡೀಸೆಲ್‌ ಪೂರೈಕೆ ಮಾಡುವ ಉದ್ದೇಶದಿಂದ ಬಸ್‌ ಘಟಕಗಳಲ್ಲಿಯೇ ಬಂಕ್‌ ತೆರೆ ಯುವ ಪ್ರಸ್ತಾವ ಬಂದಿದ್ದು ಅನುಮತಿ ನೀಡುವ ಕುರಿತಂತೆ ಚಿಂತನೆ ನಡೆದಿದೆ' ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

'ಸಾರಿಗೆ ಸಂಸ್ಥೆಯು ಸಗಟು ರೂಪ ದಲ್ಲಿ ಡೀಸೆಲ್‌ ಖರೀದಿಸಿದರೆ ಲೀಟರ್‌ಗೆ ರೂ 8-10ರಷ್ಟು ತುಟ್ಟಿಯಾಗಲಿದೆ. ಆದರೆ ಘಟಕಗಳಲ್ಲಿ ಈಗಾಗಲೇ ಸಂಸ್ದೆ ಹೊಂದಿರುವ ಬಂಕ್‌ಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲು ತೈಲ ನಿಗಮ ಸಿದ್ಧವಿಲ್ಲ. ಹೊಸದಾಗಿ ಬಂಕ್‌ ಸ್ಥಾಪನೆಗೆ ಜಾಗ ನೀಡುವಂತೆ ಕೋರಿದ್ದು, ಈ ಸಂಬಂಧ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಹೇಳಿದರು.

'ಪ್ರಯಾಣಿಕರ ಸುರಕ್ಷಿತೆ ದೃಷ್ಟಿ ಯಿಂದ ರಾತ್ರಿ ಸಂಚರಿಸುವ ಬಸ್‌ಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾ ಗುವುದು. ಈಗಾಗಲೇ ಬೆಂಗಳೂರಿನಲ್ಲಿ ಸಂಚರಿಸುವ 600 ಬಸ್‌ಗಳಲ್ಲಿ ಇಂತಹ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಉಳಿದ ಬಸ್‌ಗಳಲ್ಲಿ ಶೀಘ್ರವೇ ಅಳವಡಿ ಸಲಾಗುವುದು' ಎಂದು ಹೇಳಿದರು.

'ರಜೆ ನೀಡುವ ಸಂಬಂಧ ಅಧಿಕಾರಿ ಗಳು ಸಿಬ್ಬಂದಿಯನ್ನು ಸತಾಯಿಸು ವುದು, ಲಂಚ ಕೇಳುತ್ತಿರುವುದು ಗಮ ನಕ್ಕೆ ಬಂದಿದೆ. ಸಿಬ್ಬಂದಿಗೆ ಆಗುತ್ತಿರುವ ಈ ಕಿರುಕುಳವನ್ನು ತಪ್ಪಿಸುವ ಸಲು ವಾಗಿ 'ರಜೆ ನಿರ್ವಹಣಾ ಕಿಯಾಸ್ಕ್‌' ಗಳನ್ನು ಅಳವಡಿಸಲು ನಿರ್ಧರಿಸ ಲಾಗಿದೆ. ತಮಗೆ ಲಭ್ಯವಿರುವ ರಜೆಗಳು ಎಷ್ಟು, ಯಾವಾಗ ತೆಗೆದುಕೊಳ್ಳಲು ಅವಕಾಶ ಇದೆ ಎಂಬ ಮಾಹಿತಿಯನ್ನು ಈ ಕಿಯಾಸ್ಕ್‌ಗಳಿಂದ  ಪಡೆಯ ಬಹುದು. ಸಿಬ್ಬಂದಿಗೆ ಸಿಗಬೇಕಾದ ಸೌಲಭ್ಯಗಳು, ಕರ್ತವ್ಯದ ಅವಧಿ ಕುರಿತಂತೆ ಎಲ್ಲ ಮಾಹಿತಿ ಪಾರದರ್ಶಕ ವಾಗಿಯೇ ಸಿಗುವುದರಿಂದ ಶೋಷಣೆಗೆ ಅವಕಾಶ ಇರುವುದಿಲ್ಲ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT