ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಡಿಪೊ ನಿರ್ಮಾಣಕ್ಕೆ ಜಾಗ ನೀಡಲು ಮನವಿ

Last Updated 14 ಡಿಸೆಂಬರ್ 2013, 7:54 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಕೆಎಸ್‌ಆರ್‌ಟಿಸಿ ಡಿಪೊಗೆ ಜಾಗ ನೀಡುವಂತೆ ಕೋರಿ ಪುರಸಭೆ ಸದಸ್ಯರ ನಿಯೋಗ ಗುರುವಾರ ಜಿಲ್ಲಾಧಿಕಾರಿ ಸತ್ಯಮೂರ್ತಿ ಅವರಿಗೆ ಮನವಿ ಸಲ್ಲಿಸಿತು. ಪುರಸಭೆ ಅಧ್ಯಕ್ಷೆ ಗೀತಾ ಮಾತ­ನಾಡಿ, ಕೆಎಸ್ಆರ್‌ಟಿಸಿ ನಿಯಂತ್ರಣಾ­ಧಿಕಾರಿ ಕೋರಿಕೆ ಮೆರೆಗೆ ಪಟ್ಟಣದಿಂದ 2 ಕಿ.ಮೀ. ದೂರವಿರುವ ಕಾಡೇನಹಳ್ಳಿ ಬಳಿ 6.3 ಎಕರೆ ಗೋಮಾಳದ ಜಮೀನು ಗುರುತಿಸಲಾಗಿದೆ.

ಜಮೀನನ್ನು ಡಿಪೊಗೆ ಮುಂಜೂರು ಮಾಡಿದರೆ ತಾಲ್ಲೂಕಿನಲ್ಲಿ ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲು ಸಹಕಾರಿಯಾಗುತ್ತದೆ ಎಂದರು. ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.­ಚಂದ್ರಶೇಖರ್ ಮಾತನಾಡಿ ಸ್ಥಳದ ಅಭಾವದಿಂದ ಡಿಪೊ ನಿರ್ಮಾಣ ನೆನೆಗುದಿಗೆ ಬಿದ್ದಿದೆ. ಈಗಾಗಲೆ ಪುರಸಭೆಯಲ್ಲಿ ₨ 6 ಲಕ್ಷ ಹಣವನ್ನು ಡಿಪೊ ನಿರ್ಮಾಣಕ್ಕಾಗಿ ಮೀಸಲಿರಿಸ­ಲಾ­ಗಿದೆ. ಡಿಪೊ ನಿರ್ಮಾಣದಿಂದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಹಕಾರಿಯಾಗಲಿದೆ ಎಂದರು.

ಶಾಸಕ ಸಿ.ಬಿ.ಸುರೇಶ್ ಬಾಬು, ಪುರಸಭೆ ಉಪಾಧ್ಯಕ್ಷೆ ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.­ಚಂದ್ರಶೇಖರ್, ಸದಸ್ಯರಾದ ಎಚ್.ಬಿ.­ಪ್ರಕಾಶ್್, ಸಿ.ಎಸ್.ರಮೇಶ್, ಮಲ್ಲೇಶಯ್ಯ, ಮಹಮದ್ ಖಲಂ­ದರ್, ಸಿ.ಪಿ.ಮಹೇಶ್, ಎಂ.ಕೆ.ರವಿ­ಚಂದ್ರ, ರಾಜಶೇಖರ್, ಧರಣಿ ಲಕ್ಕಪ್ಪ, ರೂಪಾ, ಇಂದಿರಮ್ಮ, ರೇಣುಕಮ್ಮ, ಪ್ರೇಮಾ, ಅಶೋಕ್ ಹಾಗೂ ಸಿ.ಆರ್.­ತಿಮ್ಮರಾಯಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT