ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ಗಳು ನಿಲ್ಲದ ನಿಲ್ದಾಣ

Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಯಶವಂತಪುರ ವೃತ್ತದಿಂದ ನೆಲಮಂಗಲದವರೆಗೂ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈಗ ಚತುಷ್ಪಥ ರಸ್ತೆ, ಎತ್ತರಿಸಿದ ಹೆದ್ದಾರಿಗಳು ಹಾಗೂ ಫ್ಲೈಓವರ್‌ಗಳು ಆಗಿವೆ. ಇದರ ಜತೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣಗಳನ್ನು ಕಟ್ಟಿದ್ದಾರೆ. ಇದರಿಂದ ಸಿಟಿಬಸ್‌ಗಳಲ್ಲಿ ಸಂಚರಿಸುವ ನಾಗರಿಕರಿಗೆ ಮಳೆಗಾಲ ಹಾಗೂ ಬಿಸಿಲಿನಲ್ಲಿ ಕಾಯುವುದಕ್ಕೆ ಅನುಕೂಲವಾಗಿದೆ.

ಅರಿಶಿನಕುಂಟೆ ಗ್ರಾಮದಲ್ಲಿ ನೆಲಮಂಗಲ ಕಡೆ ಹೋಗುವ ಹಾಗೂ ಬೆಂಗಳೂರು ಕಡೆ ಹೋಗುವ ಸಲುವಾಗಿ ಎರಡು ಬಸ್ ನಿಲ್ದಾಣಗಳನ್ನು ದೊಡ್ಡ ಮೊತ್ತದ ಹಣ ಖರ್ಚು ಮಾಡಿ ಕಟ್ಟಿದ್ದಾರೆ. ಆದರೆ ಬೆಂಗಳೂರಿನಿಂದ ಬಂದು ನೆಲಮಂಗಲ ಕಡೆ ಹೋಗುವ ಅರಸಿನಕುಂಟೆ, ಆದರ್ಶನಗರ ನಿಲ್ದಾಣದ ಹತ್ತಿರ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ.

ಇನ್ನು ಬಸ್‌ಗಳಲ್ಲಿ ಮಹಿಳೆಯರು, ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಮೀಸಲಾದ ಆಸನಗಳಲ್ಲಿ ಯುವಕರು ಕೂತಿರುತ್ತಾರೆ.

ಹಿರಿಯ ನಾಗರಿಕರು ಹಾಗೂ ಮಕ್ಕಳನ್ನು ಎತ್ತಿಕೊಂಡ ಹೆಂಗಸರು ಕೇಳಿಕೊಂಡರೂ ಯುವಕರು ಬಹಳಷ್ಟು ಸಲ ಸ್ಥಳವನ್ನು ಬಿಟ್ಟುಕೊಡುವುದಿಲ್ಲ. ನಿರ್ವಾಹಕರಿಗೆ ತಿಳಿಸಿದರೂ ಸಹಾಯಕ್ಕೆ ಬರುವುದಿಲ್ಲ. ಸಂಬಂಧಪಟ್ಟ ಬಿಎಂಟಿಸಿ ಅಧಿಕಾರಿಗಳು ನಿರ್ವಾಹಕರು ಮತ್ತು ಚಾಲಕರಿಗೆ ಈ ಕುರಿತು ಕಟ್ಟುನಿಟ್ಟಾಗಿ ಆದೇಶಗಳನ್ನು ಪಾಲಿಸುವಂತೆ ತಿಳಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT