ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ: ಕ್ಷಿಪ್ರಕ್ರಾಂತಿ ಯತ್ನ ವಿಫಲ

Last Updated 19 ಜನವರಿ 2012, 19:35 IST
ಅಕ್ಷರ ಗಾತ್ರ

ಢಾಕಾ (ಪಿಟಿಐ): ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರವನ್ನು ಪದಚ್ಯುತಗೊಳಿಸಲು ಒಳಸಂಚು ರೂಪಿಸಿ ಕ್ಷಿಪ್ರಕ್ರಾಂತಿಗೆ ಯತ್ನಿಸಿದ ಕೆಲ ಕಟ್ಟಾ ಇಸ್ಲಾಂ ಸೇನಾಧಿಕಾರಿಗಳ ಯೋಜನೆಯನ್ನು ವಿಫಲಗೊಳಿಸಿ, ಇಬ್ಬರು ಮಾಜಿ ಸೇನಾಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಬಾಂಗ್ಲಾ ದೇಶದ ಸೇನೆ ಗುರುವಾರ ತಿಳಿಸಿದೆ.

`ಪ್ರಜಾಸತ್ತಾತ್ಮಕವಾದ ಸರ್ಕಾರಿ ವ್ಯವಸ್ಥೆಯನ್ನು ಹಾಳುಗೆಡವಲು ಸೇನೆಯಲ್ಲಿರುವ ಕೆಲ ಅಧಿಕಾರಿಗಳು ಸಂಚು ನಡೆಸಿದ್ದ ಬಗ್ಗೆ ಖಚಿತವಾದ ಸಾಕ್ಷ್ಯಗಳು ದೊರೆತಿವೆ~ ಎಂದು ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ಮಹಮ್ಮದ್ ಮಸೂದ್ ರಜಾಕ್ ತಿಳಿಸಿದ್ದಾರೆ.

`ಸೇನೆಯ ಅಧಿಕಾರಿಗಳು ಕೆಲವು ದೇಶಭ್ರಷ್ಟ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿ, ಮೊಬೈಲ್ ಮತ್ತು ಅಂತರ್ಜಾಲದ ಸಹಾಯದಿಂದ ದೇಶದ್ರೋಹದಂತಹ ಹೀನ ಕೃತ್ಯ ನಡೆಸಲು ಸಂಚು ರೂಪಿಸಿದ್ದರು~ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT