ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ: ಮತ್ತೆ ಐವರ ಸಾವು

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಢಾಕಾ (ಪಿಟಿಐ): ಜಮಾತೆ ಇಸ್ಲಾಮಿ ಮುಖಂಡನನ್ನು ಗಲ್ಲಿಗೇರಿಸಿ­ದ್ದನ್ನು ವಿರೋ­ಧಿಸಿ  ಭುಗಿಲೆದ್ದಿರುವ ಹಿಂಸಾ ಚಾರ ಮುಂದು­ವರಿದಿದ್ದು ಸೋಮವಾರ ಐವರು ಸಾವನ್ನಪ್ಪಿದ್ದಾರೆ.

ಈ ಮಧ್ಯೆ 1971ರಲ್ಲಿ ಪಾಕ್ ವಿರುದ್ಧ  ನಡೆದ ಯುದ್ಧದಲ್ಲಿ ವಿಜಯ ಸಾಧಿಸಿದ ಸ್ಮರಣೆಗಾಗಿ ದೇಶ­ದೆಲ್ಲೆಡೆ ಕಾರ್ಯಕ್ರಮ ನಡೆಸಲಾಗಿದೆ. ಈ ಮಧ್ಯೆಯೂ ಹಿಂಸೆ ಮುಂದುವರಿ­ದಿದೆ.

‘ನೈರುತ್ಯ ಸತ್‌ಖೈರ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿ­ಯಲ್ಲಿ ಐವರು ಉಗ್ರಗಾಮಿಗಳು ಸಾವನ್ನಪ್ಪಿ­ದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಪಡೆಗಳ ದಾಳಿ ಬಲಿ ಯಾದ­ವರು ಜಮಾತ್‌ನ ಹೋರಾಟ ಗಾರರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಗುರುವಾರದಿಂದ ಆರಂಭವಾಗಿರುವ ಹಿಂಸಾಚಾರದಲ್ಲಿ ಕನಿಷ್ಠ ಪಕ್ಷ 30 ಮಂದಿ ಸಾವನ್ನಪ್ಪಿದ್ದಾರೆ.

ಪ್ರಮುಖ ನಗರಗಳಲ್ಲಿ ಪ್ರತಿಭಟ­ನಾ-­ಕಾ­ರರು ರಸ್ತೆಗಿಳಿಯುವುದನ್ನು ತಡೆ­ಯಲು ಅರೆ ಸೇನಾ ಪಡೆ, ಬಾಂಗ್ಲಾ ಗಡಿ ಭದ್ರತಾ ಪಡೆ (ಬಿಜಿಬಿ), ಮತ್ತು ಕ್ಷೀಪ್ರ ಕಾರ್ಯಾಚರಣೆ ಪಡೆ (ಆರ್‌ಎಬಿ)ಯ ಹೆಲಿಕಾಪ್ಟರ್‌ಗಳು ನಿಗಾ ವಹಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT