ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ ರಾಜಕೀಯ: ಇರ್ಷಾದ್‌ ಕೇಂದ್ರ ಬಿಂದು

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಢಾಕಾ (ಪಿಟಿಐ): ಚುನಾವಣೆ ಹೊಸ್ತಿ­ಲಿ­ನಲ್ಲಿರುವ ಬಾಂಗ್ಲಾ ದೇಶದಲ್ಲಿ ೨೩ ವರ್ಷಗಳ ಹಿಂದೆ ಮಿಲಿಟರಿ ಆಡಳಿತ­ಗಾರರಾಗಿದ್ದ ಎಚ್‌.ಎಂ.­ಇರ್ಷಾದ್‌ ಈಗ ಕೇಂದ್ರ ಬಿಂದು­ ಆಗಿದ್ದಾರೆ.

ಆಡಳಿತಾರೂಢ ಅವಾಮಿ ಲೀಗ್‌ನ ಮಿತ್ರಪಕ್ಷದಲ್ಲಿದ್ದ ಇರ್ಷಾದ್‌ ಅವರು ಚುನಾವಣೆ ಬಹಿಷ್ಕರಿಸಲು ಕರೆ ನೀಡಿದ್ದ ವಿರೋಧ ಪಕ್ಷಗಳ ಮನವಿಗೆ ಸಹಮತ ವ್ಯಕ್ತಪಡಿಸಿದ್ದು, ಜ. ೫ರಂದು ನಡೆಯುವ ಚುನಾವಣೆ­ಯನ್ನು ಬಹಿಷ್ಕರಿಸುವುದಾಗಿ ತಿಳಿಸುವ ಮೂಲಕ ರಾಜಕೀಯ ಮುಂಚೂಣಿಗೆ ಬಂದಿದ್ದಾರೆ.

ಮಾಜಿ ಅಧ್ಯಕ್ಷರಾಗಿರುವ ೮೩ ವರ್ಷದ ಇರ್ಷಾದ್‌ ಅವರ ಜತಿಯಾ ಪಕ್ಷ (ಜೆಪಿ) 3 ದಿನದ ಹಿಂದೆ ಆಡಳಿತಾ­ರೂಢ ಅವಾಮಿ ಲೀಗ್‌ ಜತೆಗಿನ ಸಂಬಂಧವನ್ನು ಕಡಿದು­ಕೊಂಡಿದೆ.

ದೇಶದಲ್ಲಿ ಸೂಕ್ತ ವಾತಾವರಣ ನಿರ್ಮಾಣ ಆಗುವವರಿಗೆ ಚುನಾ­ವಣೆಗೆ ಮುಂದಾಗಬಾರದು ಎನ್ನು­ವುದು ಇರ್ಷಾದ್‌ ಬೇಡಿಕೆ­ಯಾ­ಗಿದ್ದು, ಈ ಕಾರಣದಿಂದಲೇ ಚುನಾವಣೆ ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ.

ವಿರೋಧ ಪಕ್ಷಗಳ ಒತ್ತಡಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ಪ್ರಧಾನಿ ಶೇಖ್‌ ಹಸೀನಾ ಅವರನ್ನು ಇರ್ಷಾದ್‌ ಅವರ ನಡೆ ಇನ್ನಷ್ಟು ಸಂದಿಗ್ಧಕ್ಕೆ ನೂಕಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ ಜತಿಯಾ ಪಕ್ಷ ಜನಪ್ರಿಯತೆಯಲ್ಲಿ ದೇಶ­ದಲ್ಲಿ ಮೂರನೇ ದೊಡ್ಡ ಪಕ್ಷವಾಗಿದೆ. ಒಂದೊಮ್ಮೆ ಬಾಂಗ್ಲಾ­ದೇಶ್‌ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ) ಚುನಾವಣೆ ಬಹಿಷ್ಕರಿಸಿದರೆ ಜತಿಯಾ ಪಕ್ಷ ಪ್ರಮುಖ ವಿರೋಧ ಪಕ್ಷವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT