ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾಕ್ಕೆ ವಿಶ್ವಕಪ್ ಕನಸು!

Last Updated 16 ಫೆಬ್ರುವರಿ 2011, 17:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬಾಂಗ್ಲಾ ದೇಶಕ್ಕೆ ಈ ಬಾರಿಯ ವಿಶ್ವಕಪ್‌ನಲ್ಲಿ ಕಳೆದ ಬಾರಿಗಿಂತಲೂ ಉತ್ತಮ ಪ್ರದರ್ಶನ ನೀಡುವ ಗುರಿ. ಅದಕ್ಕಾಗಿಯ  ಶಕೀಬ್ ಅಲ್ ಹುಸೇನ್ ಬಳಗ ಭರ್ಜರಿ ತಯಾರಿ ನಡೆಸಿದೆ.

ಅಂಕಿ-ಸಂಖ್ಯೆಗಳು ಮತ್ತು ಇತಿಹಾಸದ ಪ್ರಕಾರ ಬಾಂಗ್ಲಾದ ಸಾಮರ್ಥ್ಯವನ್ನು ಹೇಳುವುದಾದರೆ, ಅದು ಹೆಚ್ಚು ದೂರ ಸಾಗುವುದು ಕಷ್ಟ. ಆದರೆ, ಶ್ರೀಲಂಕಾ ತಂಡವನ್ನು ಮಾದರಿಯಾಗಿಟ್ಟುಕೊಂಡಿರುವ ಬಾಂಗ್ಲಾ ಅಂತಹುದೇ ಒಂದು ಪವಾಡ ನಡೆಸಲು ಉತ್ಸುಕವಾಗಿದೆ.

1996ರ ವಿಶ್ವಕಪ್ ಗೆಲ್ಲುವ ಮುನ್ನ ಶ್ರೀಲಂಕಾ, ಅದುವರೆಗಿನ ವಿಶ್ವಕಪ್ ಟೂರ್ನಿಗಳಲ್ಲಿ ತಾನಾಡಿದ 26 ಪಂದ್ಯಗಳಲ್ಲಿ ಕೇವಲ ನಾಲ್ಕರಲ್ಲಿ ಮಾತ್ರ ವಿಜಯ  ಸಾಧಿಸಿತ್ತು.
1999ರಲ್ಲಿ ವಿಶ್ವಕಪ್ ಪದಾರ್ಪಣೆ ಮಾಡಿದ್ದ ಬಾಂಗ್ಲಾ ಪಾಕಿಸ್ತಾನಕ್ಕೆ ಆಘಾತ ನೀಡಿತ್ತು. ಸ್ಕಾಟ್‌ಲೆಂಡ್ ಅನ್ನೂ ಸೋಲಿಸಿತ್ತು. ಅದರೊಂದಿಗೆ ಟೆಸ್ಟ್ ಆಡುವ ಹತ್ತನೇ ರಾಷ್ಟ್ರವಾಗಿ ಸೇರ್ಪಡೆಗೊಂಡಿತ್ತು. 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಬಾಂಗ್ಲಾ ಆರು ಪಂದ್ಯಗಳಲ್ಲಿ ಐದರಲ್ಲಿ ಸೋತಿತ್ತು. ಒಂದು ಪಂದ್ಯ ರದ್ದಾಗಿತ್ತು.  2007ರಲ್ಲಿ ವೆಸ್ಟ್ ಇಂಡಿಸ್‌ನಲ್ಲಿ ನಡೆದ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿತ್ತು. ಈ ಹಾದಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೆ ಚಳ್ಳೇಹಣ್ಣು ತಿನ್ನಿಸಿತ್ತು. ಈ ಬಾರಿ ಫೆಬ್ರುವರಿ 19ರಂದು ತನ್ನದೇ ನೆಲದಲ್ಲಿ ನಡೆಯುವ ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ.

ಶಕೀಬ್ ಅಲ್ ಹಸನ್, ಮಷ್ರಫೆ ಮೊರ್ತಾಜಾ, ಮೊಹಮ್ಮದ್ ಅಶ್ರಫುಲ್, ವಿಕೆಠ್‌ಕೀಪರ್ ಮುಷಫಿಕರ್ ರಹೀಮರಂತಹ ಪ್ರತಿಭಾನ್ವಿತರು ತಂಡದಲ್ಲಿದ್ದಾರೆ.
ಒಟ್ಟಿನಲ್ಲಿ ತನ್ನ ಗುಂಪಿನ ಇತರ ತಂಡಗಳಿಗೆ ಸಮಬಲ ಪೈಪೋಟಿ ನೀಡಲು ಬಾಂಗ್ಲಾ ಸಿದ್ಧವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT