ಕೊಲಂಬೊ (ಎಎಫ್‌ಪಿ/ಪಿಟಿಐ): ಮುಂದಿನ ತಿಂಗಳು ನಡೆಯಲಿರುವ ಏಷ್ಯಾಕಪ್ ಟೂರ್ನಿಯು ನಿಗದಿಯಂತೆ ಬಾಂಗ್ಲಾದೇಶದಲ್ಲಿಯೇ ನಡೆಯ ಲಿದ್ದು, ಇದೇ ಮೊದಲ ಬಾರಿಗೆ ಆಫ್ಘಾನಿಸ್ತಾನ ತಂಡ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ.
ಶನಿವಾರ ಇಲ್ಲಿ ನಡೆದ ಏಷ್ಯಾ ಕ್ರಿಕೆಟ್ ಸಮಿತಿಯ (ಎಸಿಸಿ) ಕಾರ್ಯ ಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಾಂಗ್ಲಾದಲ್ಲಿ ನಡೆಯುತ್ತಿರುವ ಗಲಭೆ ತೀವ್ರ ಸ್ವರೂಪ ಪಡೆದಿದ್ದು, ಭದ್ರತೆಯ ದೃಷ್ಟಿಯಿಂದ ಟೂರ್ನಿ ಯನ್ನು ಬೇರೆಡೆಗೆ ಸ್ಥಳಾಂತರಿಸ ಬೇಕೆಂದು ಸಭೆಯಲ್ಲಿ ಕೆಲವರು ಅಭಿ ಪ್ರಾಯ ಪಟ್ಟರು. ಹೀಗಿದ್ದರೂ ಎಸಿಸಿ ತನ್ನ ನಿಲುವಿನಲ್ಲಿ ಯಾವುದೇ ಬದ ಲಾವಣೆ ಮಾಡದಿರಲು ನಿರ್ಧರಿಸಿದೆ.
ಈ ಮೊದಲು ನಿಗದಿ ಪಡಿಸಿದಂತೆ ಫೆಬ್ರುವರಿ 24 ರಿಂದ ಮಾರ್ಚ್ 8 ರವರೆಗೆ ಬಾಂಗ್ಲಾದಲ್ಲಿಯೇ ಟೂರ್ನಿ ನಡೆಯಲಿದೆ. ಸಭೆಯಲ್ಲಿ ಬಾಂಗ್ಲಾ ಕ್ರಿಕೆಟ್ ಸಂಸ್ಥೆ ಆಟಗಾರರಿಗೆ ಸಂಪೂರ್ಣ ಭದ್ರತೆ ಒದಗಿಸುವ ಭರವಸೆ ನೀಡಿದ್ದು, ಯಾರೂ ಈ ಕುರಿತು ಪ್ರಶ್ನಿಸಲಿಲ್ಲ. ಹೀಗಾಗಿ ಪೂರ್ವ ನಿಗದಿಯಂತೆ ಎಲ್ಲಾ 11 ಪಂದ್ಯಗಳು ಢಾಕಾದಲ್ಲೇ ನಡೆಯಲಿದೆ ಎಂದು ಎಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ರಫುಲ್ ಹಕ್ ತಿಳಿಸಿದ್ದಾರೆ.
ಏಷ್ಯಾಖಂಡದ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳ ಜೊತೆಗೆ ಆಫ್ಘಾನಿ ಸ್ತಾನವೂ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ.