ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬಾಂಬೆ ಹೌಸ್'ಗೆ ರತನ್ ವಿದಾಯ ಇಂದು

ಟಾಟಾ ಸನ್ಸ್' ನೂತನ ಅಧ್ಯಕ್ಷ ಸೈರಸ್ ಮಿಸ್ತ್ರಿ ಅಧಿಕಾರ ಸ್ವೀಕಾರ
Last Updated 27 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ರತನ್ ಟಾಟಾ, ಭಾರತದ ಉದ್ಯಮ ಲೋಕದ ಅತಿಗಣ್ಯ ವ್ಯಕ್ತಿಗಳಲ್ಲೊಬ್ಬರಾದ, ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವ ಪದ್ಮವಿಭೂಷಣಕ್ಕೆ ಪಾತ್ರರಾದವರು. ಆಲದ ಮರದಂತೆ ವಿಸ್ತಾರಗೊಳ್ಳುತ್ತಲೇ ಇರುವ ಬೃಹತ್ ಟಾಟಾ ಸಮೂಹದಲ್ಲಿನ ಪ್ರಧಾನ ಹುದ್ದೆಯ 21 ವರ್ಷಗಳ ಸೇವೆಯಿಂದ ತಮ್ಮ 75ನೇ ವರ್ಷದ ಮೊದಲ ದಿನವೇ(ಶುಕ್ರವಾರ) ನಿವೃತ್ತರಾಗುತ್ತಿದ್ದಾರೆ.

ವಾರ್ಷಿಕ 10,000 ಕೋಟಿ ಡಾಲರ್ (ರೂ. 5.50 ಲಕ್ಷ ಕೋಟಿ) ವರಮಾನ, 80 ದೇಶಗಳಲ್ಲಿ ಉದ್ಯಮ ಚಟುವಟಿಕೆ ಇರುವ ಈ ಟಾಟಾ ಸಮೂಹದ ನಿಯತ್ರಣ ಸಂಸ್ಥೆಯಾದ `ಟಾಟಾ ಸನ್ಸ್'ನಲ್ಲಿ ರತನ್ ಟಾಟಾ ಅವರಿಂದ ತೆರವಾಗುತ್ತಿರುವ ಅಧ್ಯಕ್ಷ ಸ್ಥಾನವನ್ನು 44 ವರ್ಷದ ಸೈರಸ್ ಮಿಸ್ತ್ರಿ ಅಲಂಕರಿಸಲಿದ್ದಾರೆ.

ಜೆಮ್‌ಷೆಡ್‌ಜಿ ನುಸ್ಸರ‌್ವಾನ್‌ಜಿ ಟಾಟಾ ಅವರಿಂದ 1868ರಲ್ಲಿ ಆರಂಭಗೊಂಡ ಟಾಟಾ ಉದ್ಯಮ ನಂತರದ 144 ವರ್ಷಗಳ ಸುದೀರ್ಘ ಅವಧಿಯಲ್ಲಿ ಹಲವು ಕವಲುಗಳ ದೊಡ್ಡ ಸಮೂಹವಾಗಿ ವಿಸ್ತರಿಸಿಕೊಂಡಿದೆ. ಕೌಟುಂಬಿಕ ಹಿನ್ನೆಲೆಯ ಈ ಸಮೂಹವನ್ನು ಅದರ 5ನೇ ಅಧ್ಯಕ್ಷನಾಗಿದ್ದುಕೊಂಡು ಜಾಗತಿಕ ಮಟ್ಟದ ದೊಡ್ಡ ಉದ್ಯಮವಾಗಿ ಬೆಳೆಸಿದ ರತನ್ ಟಾಟಾ ಅವರ ಪಾಲಿಗೆ ಶುಕ್ರವಾರವೇ ಆ ಪ್ರತಿಷ್ಠಿತ ಹುದ್ದೆಯಲ್ಲಿನ ಕೊನೆಯ ಕೆಲಸದ ದಿನ. ಮುಂಬೈನಲ್ಲಿನ ಟಾಟಾ ಸಮೂಹದ ಪ್ರಧಾನ ಕಚೇರಿ ಇರುವ `ಮಾದರಿ' ಕಟ್ಟಡ `ಬಾಂಬೆ ಹೌಸ್'ಗೆ ವಿದಾಯ ಹೇಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT