ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಬ್‌ ಟೈಮರ್‌ ಅಳವಡಿಕೆಗೆ ಕಾಂಡೋಮ್‌ ಬಳಸಿದ್ದ ಭಟ್ಕಳ

Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ಬಾಂಬ್‌ನಲ್ಲಿ ಟೈಮರ್‌ ಅಳ­­ಡಿ­ಸಲು ಕಾಂಡೋಮ್‌ ಬಳಸು­ತ್ತಿ­ದ್ದು­ದಾಗಿ ಉಗ್ರ ಯಾಸೀನ್‌ ಭಟ್ಕಳ, ತನಿ­ಖಾ­ಧಿ­ಕಾರಿಗಳಿಗೆ ತಿಳಿಸಿದ್ದಾನೆ. ಇದರಿಂದ ಇಂಡಿ­ಯನ್‌ ಮುಜಾಹಿ­ದೀನ್‌ ಕಚ್ಚಾ ಬಾಂಬ್‌ ತಯಾರಿಕೆ ತಂತ್ರ­ಗಾರಿಕೆ ಕುತೂ­­­ಹಲದ ತಿರುವು ಪಡೆದಿದೆ.

ಮೂರು ವರ್ಷಗಳ ಹಿಂದೆ­, ವಾರಾಣ­ಸಿಯ ಗಂಗಾ ನದಿ ತಟದ ಶೀತ್ಲಾ ಘಾಟ್‌ನಲ್ಲಿ ನಡೆದ ಬಾಂಬ್‌ ಸ್ಫೋಟದಲ್ಲಿ  ಈ ತಂತ್ರ ಬಳಸಲಾಗಿತ್ತು.
ಮುಹಮ್ಮದ್‌ ಅಹ್ಮದ್‌ ಝರಾರ್‌ ಸಿದ್ದಿಬಾಪಾ ಎಂಬ ಮೂಲ ಹೆಸರನ್ನು ಹೊಂದಿರುವ ಭಟ್ಕಳ, ಪಶ್ಚಿಮ ಬಂಗಾಳ­ದಿಂದ ಸ್ಫೋಟಕಗಳ ತಯಾರಿಕೆಗೆ ಹೈಡ್ರೋಜನ್‌ ಪೆರಾಕ್ಸೈಡ್‌ ತರುತ್ತಿದ್ದ.

ಈ ಬಾಂಬ್‌ಗಳನ್ನು 2005ರಲ್ಲಿ ಲಂಡನ್‌ ಸಾರ್ವಜನಿಕ ಸಂಚಾರ ವ್ಯವಸ್ಥೆ ಮೇಲೆ ದಾಳಿ ಮಾಡಲು ಅಲ್‌ಖೈದಾ ಮೊದಲ ಬಾರಿಗೆ ಯಶಸ್ವಿಯಾಗಿ ಪ್ರಯೋಗ ಮಾಡಿತ್ತು.

ಪೊಲೀಸ್‌ ಅಧಿಕಾರಿಯೊಬ್ಬರ ಪ್ರಕಾರ. ಭಟ್ಕಳನು ಸುಮಾರು 200 ಲೀಟರ್‌ ಹೈಡ್ರೋಜನ್‌ ಪೆರಾಕ್ಸೈಡ್‌ ಅನ್ನು ಪಶ್ಚಿಮ ಬಂಗಾಳದ ರಾಸಾ ಯನಿಕ ವಸ್ತುಗಳ ಮಾರಾಟ ಅಂಗಡಿ ಯೊಂದ­ರಿಂದ ತಂದಿದ್ದ. ಇವುಗಳನ್ನು ಮುಚ್ಚಿದ ಕಂಟೇ­ನರ್‌ನಲ್ಲಿ ತುಂಬಿದ್ದ. ದ್ರವರೂಪದ ಪೆರಾಕ್ಸೈಡ್‌ ಸ್ಫೋಟಕ­­­ಗಳಲ್ಲಿ ಟೈಮರ್‌ ಒದ್ದೆಯಾಗು­ವುದನ್ನು ತಪ್ಪಿಸಲು ಕಾಂಡೋಮ್‌ನಲ್ಲಿ ಅದನ್ನು ಇಟ್ಟು, ಕಂಟೇನರ್‌ನೊಳಗೆ ಮುಚ್ಚಿಡು­ತ್ತಿದ್ದ ಭಟ್ಕಳ.

ನಂತರ ಇದನ್ನು ಸ್ಫೋಟದ ಸ್ಥಳ­ದಲ್ಲಿ ಇಡುತ್ತಿದ್ದ. ಶೀತ್ಲಾ ಘಾಟ್‌­ನಲ್ಲಿ ಇದೇ ಮಾದರಿಯ ಸ್ಫೋಟಕವನ್ನು 2010ರ ಡಿಸೆಂಬರ್‌ 7ರಂದು ಇಟ್ಟು ಸ್ಫೋಟಿಸಿದ ಪರಿಣಾಮ ಇಬ್ಬರು ಮೃತ­ಪಟ್ಟು, ಹಲವರು ಗಾಯಗೊಂಡಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

  ಸ್ಫೋಟ  ನಡೆಸಿದ ಕೂಡಲೇ ಇಂಡಿ­ಯನ್‌ ಮುಜಾಹಿದೀನ್‌ ಸಂಘಟನೆಯು ಬಾಬರಿ ಮಸೀದಿ ಧ್ವಂಸಕ್ಕೆ ಪ್ರತೀಕಾರ­ವಾಗಿ ಈ ದಾಳಿ ಮಾಡಿರುವ ಹೊಣೆ­ಹೊತ್ತು ಮುಂಬೈ­ನಿಂದ ಮಾಧ್ಯಮ­ಗಳಿಗೆ, ಇ–ಮೇಲ್‌ ಸಂದೇಶ ಕಳುಹಿಸು­ತ್ತಿತ್ತು ಎಂದು ಭಟ್ಕಳ ಖಚಿತಪಡಿಸಿ­ರುವುದಾಗಿ ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT