ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ಪಾವತಿಸದಿದ್ದರೆ ಕ್ರಮ: ಮುಖ್ಯಮಂತ್ರಿ ಎಚ್ಚರಿಕೆ

Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಸದಿದ್ದರೆ ಸಕ್ಕರೆ ಕಾರ್ಖಾ ನೆಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು. ಭಾನುವಾರ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಕ್ಕರೆ ಕಾರ್ಖಾನೆ ಮಾಲೀಕರು ಬಾಕಿ ಉಳಿಸಿ ಕೊಂಡಿರುವ ಹಣವನ್ನು ತಕ್ಷಣ ಬಿಡು ಗಡೆ ಮಾಡಬೇಕು. ಯಾರು ಹಣ ಕೊಡುವುದಿಲ್ಲವೋ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾ­ಗುವುದು’ ಎಂದು ತಿಳಿಸಿದರು.

‘ಬೆಲೆ ಆಯೋಗ ರಚಿಸುವ ಕುರಿತು ಸಚಿವ ಸಂಪುಟದ ಉಪಸಮಿತಿ ನಿಯ ಮಾವಳಿಗಳನ್ನು ರೂಪಿಸುತ್ತಿದೆ. ಈ ಪ್ರಕ್ರಿ ಯೆಗಳು ಮುಗಿದ ತಕ್ಷಣ ಆಯೋಗ ಅಸ್ತಿತ್ವಕ್ಕೆ ಬರಲಿದೆ’ ಎಂದು ತಿಳಿಸಿದರು. ‘ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ರೈತರ ಜತೆ ಸರ್ಕಾರವಿದೆ. ಆತ್ಮಹತ್ಯೆ, ಸಮಸ್ಯೆ-­ಗಳಿಗೆ ಪರಿಹಾರ ಒದಗಿಸು ವುದಿಲ್ಲ ಎನ್ನುವುದನ್ನು ರೈತರು ಅರಿತು­ಕೊಳ್ಳಬೇಕು’ ಎಂದು ಕೋರಿದರು.

‘ಕೆಜೆಪಿ ಅಧ್ಯಕ್ಷ ಬಿ.ಎಸ್‌. ಯಡಿ ಯೂರಪ್ಪ ಸದನದಲ್ಲಿ ಧರಣಿ ಮಾಡು ವುದಾದರೆ ಮಾಡಲಿ. ಅವರ ಧರಣಿ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸಮಸ್ಯೆ ಗಳ ಕುರಿತು ಚರ್ಚಿಸಲು, ಕಾಯ್ದೆಗ ಳನ್ನು ರೂಪಿಸಲು ಅಧಿವೇಶನ ನಡೆಸ ಲಾಗುತ್ತದೆ. ಅಧಿವೇಶನದಲ್ಲಿ ಚರ್ಚೆ ನಡೆಯಬೇಕು. ಕೇವಲ ಧರಣಿ ಮಾಡು ವುದರಿಂದ ಯಾವುದೇ ಪ್ರಯೋಜನ ವಾಗುವುದಿಲ್ಲ’ ಎಂದು ಟೀಕಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಜತೆ ಸ್ನೇಹ ಸಂಬಂಧ ಉತ್ತಮ ಗೊಂಡಿದೆಯೇ ಎನ್ನುವ ಪ್ರಶ್ನೆಗೆ, ‘ಎಲ್ಲರ ಜತೆಗೂ ಸಂಬಂಧ ಉತ್ತಮವಾಗಿದೆ. ಯಡಿ ಯೂರಪ್ಪ ಅವರ ಜತೆಯೂ ಉತ್ತಮ ಸಂಬಂಧವಿದೆ’ ಎಂದರು. ‘ಜನರ ಸಮಸ್ಯೆಗಳ ಬಗ್ಗೆ ಚರ್ಚಿಸದೆ ವೈಯಕ್ತಿಕ ಹಿತಾಸಕ್ತಿಗಾಗಿ ಧರಣಿ ನಡೆಸುವುದು ಸರಿ ಅಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT