ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸರ್‌ ನಾರ್ಟನ್‌ ನಿಧನ

Last Updated 19 ಸೆಪ್ಟೆಂಬರ್ 2013, 20:12 IST
ಅಕ್ಷರ ಗಾತ್ರ

ಲಾಸ್‌ ವೆಗಾಸ್‌ (ಎಪಿ): ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಹೇವಿವೇಟ್‌ ಚಾಂಪಿಯನ್‌ ಅಮೆರಿಕದ ಕೆನ್‌ ನಾರ್ಟನ್‌ (70) ಬುಧವಾರ ನಿಧನರಾದರು.

ನಾರ್ಟನ್‌ 1973ರಲ್ಲಿ ಬಾಕ್ಸಿಂಗ್‌ ದಂತಕತೆ ಮುಹಮ್ಮದ್‌ ಅಲಿಗೆ ಆಘಾತ ನೀಡಿದ್ದರು. ಅಲಿ ಅವರ ದವಡೆಗೆ ಬಲವಾದ ಪೆಟ್ಟು ನೀಡಿದ್ದರು. ಆದರೆ 1976ರಲ್ಲಿ ಭಾರಿ ವಿವಾದಕ್ಕೆ ಒಳಗಾಗಿದ್ದ ಹೋರಾಟ ದಲ್ಲಿ ಅಲಿ ಎದುರು ಪರಾಭವ ಗೊಂಡಿದ್ದರು.

‘ನಾರ್ಟನ್‌ ಎರಡು ವರ್ಷಗಳಿಂದ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿ ದ್ದರು. ಒಮ್ಮೆ ಪಾರ್ಶ್ವವಾಯುಗೆ ಒಳಗಾಗಿದ್ದರು’ ಎಂದು ನಾರ್ಟನ್‌ ಅವರ ಮಾಜಿ ಮ್ಯಾನೇಜರ್‌ (ಬ್ಯುಸಿನೆಸ್‌) ಜಿನೆ ಕಿಲ್ರೊಯ್‌ ತಿಳಿಸಿದ್ದಾರೆ.

42 ಪೈಪೋಟಿಯಲ್ಲಿ ಗೆಲುವು ಸಾಧಿ­ಸಿದ್ದ ಈ ವೃತ್ತಿಪರ ಬಾಕ್ಸರ್‌ ಹಲವು ದಿಗ್ಗಜರಿಗೆ ಆಘಾತ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT