ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಚಣಿಗೆ ಬಳಕೆ

Last Updated 19 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ವಿಶೇಷವಾದ ರೀತಿಯಲ್ಲಿ ಹೆರಳನ್ನು ಸಿಂಗರಿಸಲು ಬೇಕಾಗುವ ಬಾಚಣಿಗೆ ಬಳಕೆ ಆರಂಭವಾಗಿದ್ದು ನ್ಯೂ ಗಿನಿಯಲ್ಲಿ ಎನ್ನಲಾಗುತ್ತದೆ. ಅಲ್ಲಿನ ಜನರ ಕೂದಲು ತುಂಬಾ ಒರಟಾಗಿದ್ದರಿಂದ ಅವರು ಬಾಚಣಿಗೆಯಂಥ ವಸ್ತುವನ್ನು ಕಂಡು ಹಿಡಿದು ಅದರಿಂದ ತಮ್ಮ ಕೂದಲನ್ನು ಬಾಚಿಕೊಳ್ಳುತ್ತಿದ್ದರಂತೆ. ಅವರು ಎಮ್ಮೆಯ ಕೊಂಬಿನಿಂದ ಬಾಚಣಿಗೆ ತಯಾರಿಸಿದ್ದರಂತೆ.

ಪುರಾತನ ಕಾಲದಲ್ಲಿ ಮೂಳೆ, ಪ್ರಾಣಿಗಳ ಹಲ್ಲು, ಮರದಿಂದ ಬಾಚಣಿಕೆ ತಯಾರಿಸಲಾಗುತ್ತಿತ್ತು. ಈಜಿಪ್ಟಿಯನ್ನರು ಬಳಸಿದ ಆನೆದಂತ ಮತ್ತು ಬೀಟೆ ಮರದಿಂದ ಮಾಡಿದ ಬಾಚಣಿಗೆಗಳನ್ನು ನ್ಯೂಯಾರ್ಕ್‌ನ ಮೆಟ್ರೊಪಾಲಿಟನ್ ಮ್ಯೂಸಿಯಂನಲ್ಲಿ ನೋಡಬಹುದು.

ಏಷ್ಯಾದ ಭಾಗಗಳಲ್ಲಿ ಬಿದಿರಿನಿಂದ ಮಾಡುತ್ತಿದ್ದ ಬಾಚಣಿಗೆಗಳ ಬಳಕೆ ಇದ್ದರೆ, ಪೊಲಿನೇಷಿಯಾದಲ್ಲಿ ತೆಂಗಿನಿಂದ ಬಾಚಣಿಗೆ ಮಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT