ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಚಿಹಲ್ಲಿನ ಕ್ಯಾಪಿಬರಾ

Last Updated 4 ಜೂನ್ 2011, 19:30 IST
ಅಕ್ಷರ ಗಾತ್ರ

ಬಾಚಿ ಹಲ್ಲು ಇರುವ ವಿಶ್ವದ ದೊಡ್ಡ ಪ್ರಾಣಿ ಕ್ಯಾಪಿಬರಾ. ಇದು ದಕ್ಷಿಣ ಅಮೆರಿಕದಲ್ಲಿ ಕಂಡುಬರುವ  ಪ್ರಾಣಿ. ಗಿನಿ ಹಂದಿಗಳ ಸಂಬಂಧಿ ಎನಿಸಿಕೊಂಡರೂ ಶುದ್ಧ ಸಸ್ಯಾಹಾರಿ.

1.22 ಮೀಟರ್ ಎತ್ತರ ಮತ್ತು 65 ಕೆ.ಜಿ ತೂಕ ಇರುವ ಕ್ಯಾಪಿಬರಾಗಳು ಹುಲ್ಲು, ಗಿಡ, ಹಣ್ಣು, ಮರದ ತೊಗಟೆಗಳನ್ನು ತಿನ್ನುತ್ತವೆ. ವಯಸ್ಕ ಕ್ಯಾಪಿಬಾರಾಗಳು ದಿನಕ್ಕೆ ಮೂರೂವರೆ ಕಿಲೋ ಹುಲ್ಲು ತಿನ್ನುತ್ತವೆ. ಕೆಂಪು ಹಳದಿ ಕೂದಲ ನಿರುಪದ್ರವಿ ಕ್ಯಾಪಿಬರಾಗಳಿಗೆ ಬಾಲ ಇರುವುದಿಲ್ಲ.
 
20 ಬಾಚಿ ಹಲ್ಲುಗಳ ಕ್ಯಾಪಿಬರಾದ ಹಿಂದಿನ ಕಾಲುಗಳು ಮುಂದಿನವಕ್ಕಿಂತ ಕೊಂಚ ಎತ್ತರ ಇರುತ್ತದೆ. ಹೆಣ್ಣು ಗಂಡಿಗಿಂತ ಕೊಂಚ ಹೆಚ್ಚು ತೂಕ ಇರುತ್ತದೆ. ಆಯ್ದ ಸಸ್ಯಗಳನ್ನು ಮಾತ್ರ ಸೇವಿಸುವ ಇವುಗಳ ಮಾಂಸಕ್ಕೆ ದಕ್ಷಿಣ ಅಮೆರಿಕ ಮತ್ತು ವೆನಿಜುವೆಲಾದಲ್ಲಿ ಭಾರಿ ಬೇಡಿಕೆ ಇದೆ. ಅದೇ ಇವಕ್ಕೆ ಕುತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT