ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನಂಗಳದಲ್ಲಿ ಹೊಸ ಗ್ರಹಗಳು...

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಅಮೆರಿಕ ಬಾಹ್ಯಾಕಾಶ ಅಧ್ಯಯನ ಸಂಸ್ಥೆ `ನಾಸಾ~ ನಿರ್ಮಿಸಿರುವ ಕೆಪ್ಲರ್ ದೂರದರ್ಶಕವು ಮತ್ತೆ 26 ಹೊಸ ಗ್ರಹಗಳನ್ನು ಪತ್ತೆಹಚ್ಚಿದೆ. ಈ ಗ್ರಹಗಳು 11 ವಿವಿಧ ಸೌರವ್ಯೆಹಗಳಲ್ಲಿ ಹರಡಿವೆ ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.

ಹೊಸದಾಗಿ ಪತ್ತೆ ಹಚ್ಚಿರುವ ಗ್ರಹಗಳಲ್ಲಿ ಕೆಲವು ಭೂಮಿಯ 1.5 ಪಟ್ಟು ಗಾತ್ರದಷ್ಟಿದ್ದರೆ, ಇನ್ನು ಕೆಲವು ಗಾತ್ರದಲ್ಲಿ ಗುರು ಗ್ರಹಕ್ಕಿಂತಲೂ ದೊಡ್ಡದು ಎಂದು ತಿಳಿಸಿದ್ದಾರೆ.

ಹೊಸದಾಗಿ ಪತ್ತೆಯಾಗಿರುವ ಗ್ರಹಗಳು ಭೂಮಿ, ಮಂಗಳ, ಬುಧ, ಶುಕ್ರ ಗ್ರಹಗಳಂತೆ ಶಿಲೆಗಳನ್ನು ಹೊಂದಿವೆಯೇ ಅಥವಾ ಸೌರವ್ಯೆಹದ ಇತರ ಗ್ರಹಗಳಂತೆ ಅನಿಲದಿಂದ ಕೂಡಿವೆಯೇ ಎಂಬುದನ್ನು ನಾಸಾ ಇನ್ನೂ ದೃಢಪಡಿಸಿಲ್ಲ.

`ಕೆಪ್ಲರ್ ದೂರದರ್ಶಕವನ್ನು ಅಂತರಿಕ್ಷಕ್ಕೆ ಕಳುಹಿಸುವ ಮೊದಲು ಬ್ರಹ್ಮಾಂಡದಲ್ಲಿ ಸುಮಾರು 500 ಗ್ರಹಗಳು ಇರಬಹುದು ಎಂದು ನಂಬಲಾಗಿತ್ತು. ಆದರೆ ಕೇವಲ ಎರಡೇ ವರ್ಷಗಳಲ್ಲಿ ನಮ್ಮ ಕಲ್ಪನೆ ಸುಳ್ಳಾಗುವ ಲಕ್ಷಣ ಕಂಡು ಬಂದಿದೆ. ಆಗಸವು ನಾವು ಊಹಿಸಿದ್ದಕ್ಕಿಂತ ದೊಡ್ಡದಾಗಿದೆ.  ಈಗಾಗಲೇ ಕೆಪ್ಲರ್ ದೂರದರ್ಶಕವು 60 ಹೊಸ ಗ್ರಹಗಳು ಮತ್ತು 2,300 ಸಂಭಾವ್ಯ ಗ್ರಹಗಳನ್ನು ಗುರುತಿಸಿದೆ~ ಎಂದು ಕೆಪ್ಲರ್ ಯೋಜನೆಯ ವಿಜ್ಞಾನಿ ಡೌಗ್ ಹಡ್ಗಿನ್ಸ್ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT