ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್ಬೆಕ್ಯೂ ಸವಿರುಚಿ

Last Updated 2 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬಾರ್ಬೆಕ್ಯೂ ನೇಷನ್ ರೆಸ್ಟೊರೆಂಟ್ ಮೊಘಲ್, ನಿಜಾಂ, ರಜಪೂತ್ ಹಾಗೂ ಕಾಶ್ಮೀರಿ ರಾಜಶೈಲಿಯ ತಿನಿಸುಗಳಿಗೆ ಪ್ರಸಿದ್ಧಿ. ಮೊದಲ ಸಲ ರೆಸ್ಟೊರೆಂಟ್‌ನಲ್ಲಿ ಲೈವ್‌ಗ್ರಿಲ್ ಪರಿಚಯಿಸಿದ ಕೀರ್ತಿ ಸಹ ಅದಕ್ಕೆ ಸಲ್ಲುತ್ತದೆ.

ಅಲ್ಲಿ ಈಗ ರಾಜ ಮಹಾರಾಜರು ಸೇವಿಸುತ್ತಿದ್ದ ರಾಜ ವೈಭೋಗದ ವಿಶೇಷ ತಿನಿಸುಗಳ `ಶಾಹಿ ದಸ್ತರ್ಕ್‌ವಾನ್~ ಆಹಾರ ಮೇಳ ಆರಂಭವಾಗಿದ್ದು ಸೆ 11ರ ವರೆಗೆ ನಡೆಯಲಿದೆ. `ಫೀಲ್ ಟ್ರೂಲಿ ಲೈಕ್ ಎ ಕಿಂಗ್~ ಎಂಬ ಕ್ಯಾಚಿಟ್ಯಾಗ್ ಲೈನ್‌ನೊಂದಿಗೆ ಆಹಾರ ಪ್ರಿಯರ ನಾಲಗೆ ರುಚಿ ತಣಿಸಲಿದೆ.

ಬಾರ್ಬೆಕ್ಯೂ ಸಸ್ಯಾಹಾರ ಹಾಗೂ ಮಾಂಸಾಹಾರ ತಿನಿಸುಗಳಿಗೂ ಖ್ಯಾತಿ ಹೊಂದಿದೆ. ಇಲ್ಲಿ ಭೇಟಿ ನೀಡಿ ರಾಜ ವೈಭೋಗದ ತಿನಿಸುಗನ್ನು ಸವಿಯಬಹುದು. ರೆಸ್ಟೋರೆಂಟ್‌ನ ಒಳಗೋಡೆಯಲ್ಲಿ ಚಿತ್ರಣಗೊಂಡಿರುವ ಕಲೆ ಹಾಗೂ ಹಿತವಾಗಿ ಕೇಳುವ ಸಂಗೀತ ಭೋಜನದ ಸವಿಯನ್ನು ಹೆಚ್ಚಿಸಲಿದೆ.

ಗುಷ್ತಬಾ, ಸುಲ್ತಾನಿ ಮುರ್ಗ್, ಟಬ್ಕ್ ಮಾಸ್ ಮೊದಲಾದ ಮಾಂಸಾಹಾರಿ ಖಾದ್ಯಗಳು. ರಜಪುತ್ ರಾಜರ ಇಷ್ಟದ ಶಾಹಿ ದಸ್ತ್‌ರ್ಕ್‌ವಾನ್, ಡಿಂಗ್ರಿ ಈ ಖಾಸ್, ದಹೀ ಕೆ ಶೋಲೆ ಈ ಮೇಳದ ವಿಶೇಷ ಆಕರ್ಷಣೆ.

ಸ್ಥಳ: ಇಂದಿರಾನಗರ, ಕೋರಮಂಗಲ ಮತ್ತು ಜೆಪಿ ನಗರ ರೆಸ್ಟೊರೆಂಟ್. ಮಾಹಿತಿಗೆ: 93413 32477. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT